Home ನಮ್ಮ ಕರಾವಳಿ ಎಸ್ ಎಸ್ ಎಲ್ ಸಿ ಫಲಿತಾಂಶ: ಊಟಕ್ಕಿಲ್ಲದ ಉಪ್ಪಿನಕಾಯಿಯಂತಾದ ಇಲಾಖೆಯ ವೆಬ್ಸೈಟ್

ಎಸ್ ಎಸ್ ಎಲ್ ಸಿ ಫಲಿತಾಂಶ: ಊಟಕ್ಕಿಲ್ಲದ ಉಪ್ಪಿನಕಾಯಿಯಂತಾದ ಇಲಾಖೆಯ ವೆಬ್ಸೈಟ್

ಮಂಗಳೂರು: 2021 ರ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶವನ್ನು (SSLC Exam Results ) ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಇಂದು ಸಂಜೆ 3.30 ಕ್ಕೆ ಪ್ರಕಟಿಸಿದ್ದಾರೆ. ಫಲಿತಾಂಶ ನೋಡಲು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಅಧಿಕೃತ ವೆಬ್ಸೈಟ್ ಮಾತ್ರ ಓಪನ್ ಆಗದೇ ವಿದ್ಯಾರ್ಥಿಗಳು ಪಡಬಾರದ ಪಾಡು ಪಡುತ್ತಿದ್ದಾರೆ.

ವೆಬ್‌ಸೈಟ್ ಅನ್ನು ಲಕ್ಷಾಂತರ ಮಂದಿ ಒಮ್ಮೆಲೆ ಕ್ಲಿಕ್ ಮಾಡುತ್ತಿರುವ ಪರಿಣಾಮ ಅದು ಹ್ಯಾಂಗ್ ಆಗಿದ್ದು, ಫಲಿತಾಂಶ ನೋಡಲು ಚಾತಕಪಕ್ಷಿಯಂತೆ ಕಾಯುತ್ತಿರುವ ವಿದ್ಯಾರ್ಥಿಗಳು ಮತ್ತು ಪಾಲಕರಿಗೆ ಸಮಸ್ಯೆ ಉಂಟಾಗಿದೆ . ಪ್ರತಿ ವರ್ಷವೂ ಇದೇ ಸಮಸ್ಯೆಯನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ವೆಬ್ ಸೈಟ್ ಎದುರಿಸುತ್ತಿದೆ. ಅದರೆ ಇದಕ್ಕೆ ಯಾವುದೇ ಪರಿಹಾರ ಕಂಡುಕೊಳ್ಳುವ ದಿಶೆಯಲ್ಲಿ ಇಲಾಖೆ ಮನಸ್ಸು ಮಾಡಿಲ್ಲ


ಅಲ್ಲದೇ, ಎಸ್ಸೆಸ್ಸೆಲ್ಸಿ ಬೋರ್ಡ್‌ಗೆ ನೋಂದಣಿಯಾಗಿರುವ ಮೊಬೈಲ್‌ ಸಂಖ್ಯೆಗೆ ಶಿಕ್ಷಣ ಇಲಾಖೆಯಿಂದ ಮಕ್ಕಳ ಫಲಿತಾಂಶದ ಮೆಸೇಜ್‌ ಮೂಲಕ ಬರುತ್ತದೆ ಎಂದು ಬೋರ್ಡ್ ತಿಳಿಸಿತ್ತು . ಆದರೆ, ಇದುವರೆಗೆ ಈ ಮೆಸೇಜ್‌ ಕೂಡ ಬಾರದೇ, ವೆಬ್‌ಸೈಟ್‌ ಕೂಡ ಓಪನ್‌ ಆಗದೇ ಇರುವ ಕಾರಣ ವಿದ್ಯಾರ್ಥಿಗಳು ಮತ್ತು ಪಾಲಕರ ತಲ್ಲಣಕ್ಕೆ ಕಾರಣವಾಗಿದೆ .

- Advertisement -
- Advertisement -
- Advertisement -
- Advertisment -

Most Popular