Home ರಾಷ್ಟ್ರೀಯ ಇದುವರೆಗೆ 500 ಕೆ.ಜಿ.ಚಿನ್ನ ಕರಗಿಸಿದ್ದೇವೆ:ಹೈಕೋರ್ಟ್‌ಗೆ ತಮಿಳುನಾಡು ಸರ್ಕಾರ ಮಾಹಿತಿ

ಇದುವರೆಗೆ 500 ಕೆ.ಜಿ.ಚಿನ್ನ ಕರಗಿಸಿದ್ದೇವೆ:
ಹೈಕೋರ್ಟ್‌ಗೆ ತಮಿಳುನಾಡು ಸರ್ಕಾರ ಮಾಹಿತಿ

ಚೆನ್ನೈ: ದೇಗುಲಗಳಲ್ಲಿ ಇರುವ ಚಿನ್ನ ಕರಗಿಸಿ ಅವುಗಳನ್ನು ಗಟ್ಟಿಗಳನ್ನಾಗಿ ಮಾಡುವ ಕ್ರಮ 44 ವರ್ಷ ಕ್ರಮ ಜಾರಿಯಲ್ಲಿದೆ ಎಂದು ತಮಿಳುನಾಡು ಸರ್ಕಾರ ಮದ್ರಾಸ್‌ ಹೈಕೋರ್ಟ್‌ಗೆ ಅರಿಕೆ ಮಾಡಿಕೊಂಡಿದೆ.

- Advertisement -

ಇದುವರೆಗೆ 500 ಕೆಜಿ ಚಿನ್ನವನ್ನು ಪರಿವರ್ತಿಸಲಾಗಿದೆ. 1977ರಿಂದಲೇ ಚಿನ್ನವನ್ನು ಕರಗಿಸಿ ಗಟ್ಟಿಗಳನ್ನಾಗಿಸಿ, ಬ್ಯಾಂಕ್‌ನಲ್ಲಿ ಠೇವಣಿ ಇರಿಸಲಾಗುತ್ತಿದೆ ಎಂದು ರಾಜ್ಯ ಸರ್ಕಾರದ ಅಡ್ವೊಕೇಟ್‌ ಜನರಲ್‌ ಆರ್‌.ಷಣ್ಮುಗಸುಂದರಂ ನ್ಯಾ.ಆರ್‌.ಮಹಾದೇವನ್‌ ಮತ್ತು ನ್ಯಾ. ಅಬ್ದುಲ್‌ ಖುಧ್ದೋಸ್‌ ನೇತೃತ್ವದ ನ್ಯಾಯಪೀಠಕ್ಕೆ ಈ ಅಂಶವನ್ನು ವಿವರಿಸಿದ್ದಾರೆ. ಈ ಬಗ್ಗೆ ಸೆ.9ರಂದು ಹೊರಡಿಸಲಾಗಿದ್ದ ಆದೇಶ ರದ್ದುಗೊಳಿಸಬೇಕೆಂದು 2 ಅರ್ಜಿಗಳು ಸಲ್ಲಿಕೆಯಾಗಿದ್ದವು.

- Advertisement -

ಡಿಎಂಕೆ ಸರ್ಕಾರ ತಮಿಳುನಾಡಿನಲ್ಲಿರುವ ದೇಗುಲಗಳ 2,137 ಕೆ.ಜಿ. ಚಿನ್ನವನ್ನು ಮುಂಬೈನಲ್ಲಿ ಕರಗಿಸಿ ಗಟ್ಟಿಗಳನ್ನಾಗಿ ಮಾಡಿ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಠೇವಣಿ ಇರಿಸುವ ಬಗ್ಗೆ ಚಿಂತನೆ ನಡೆಸಿತ್ತು.

- Advertisement -

ಈ ಬಗ್ಗೆ ಬಿಜೆಪಿ ಮತ್ತು ಹಿಂದೂ ಸಂಘಟನೆಗಳು ಆಕ್ಷೇಪ ಮಾಡಿದ್ದವು ಮತ್ತು ಸರ್ಕಾರದ ಕ್ರಮ ಪ್ರಶ್ನಿಸಿ ಎರಡು ಅರ್ಜಿಗಳು ಹೈಕೋರ್ಟ್‌ಗೆ ಸಲ್ಲಿಕೆಯಾಗಿದ್ದವು. ಅವುಗಳ ವಿಚಾರಣೆ ನಡೆಸಿದ ನ್ಯಾಯಪೀಠ ರಾಜ್ಯ ಸರ್ಕಾರದ ಸ್ಪಷ್ಟನೆ ಬಯಸಿತ್ತು.

“ಇದುವರೆಗೆ 500 ಕೆಜಿ ಚಿನ್ನ ಕರಗಿಸಿ, ಗಟ್ಟಿಯಾಗಿ ಪರಿವರ್ತಿಸಿ ಠೇವಣಿ ಇರಿಸಲಾಗಿದೆ. ಅದರಿಂದಾಗಿ 11 ಕೋಟಿ ರೂ. ಬಡ್ಡಿ ಸರ್ಕಾರಕ್ಕೆ ಪಾವತಿಯಾಗಿದೆ. ಈ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲಾಗಿದೆ. ಈ ಬಗ್ಗೆ ಇರುವ ಆರೋಪ ಸುಳ್ಳು’ ಎಂದು ಅಡ್ವೊಕೇಟ್‌ ಜನರಲ್‌ ನ್ಯಾಯಪೀಠಕ್ಕೆ ಮಾಹಿತಿ ನೀಡಿದ್ದಾರೆ.

- Advertisment -

Most Popular