Home ಕ್ರೈಂ ಸುದ್ದಿ ಬೇಯಿಸಿದ ಮೊಟ್ಟೆ ತಿನ್ನುವಾಗ ಗಂಟಲಿನಲ್ಲಿ ಸಿಲುಕಿಕೊಂಡು ಮಹಿಳೆ ಮೃತ್ಯು

ಬೇಯಿಸಿದ ಮೊಟ್ಟೆ ತಿನ್ನುವಾಗ ಗಂಟಲಿನಲ್ಲಿ ಸಿಲುಕಿಕೊಂಡು ಮಹಿಳೆ ಮೃತ್ಯು

ಹೈದರಾಬಾದ್: ಊಟ ಮಾಡುವ ಸಂದರ್ಭ ಬೇಯಿಸಿದ ಮೊಟ್ಟೆ ತಿನ್ನುವ ವೇಳೆ ಗಂಟಲಿನಲ್ಲಿ ಸಿಲುಕಿಕೊಂಡು ಮಹಿಳೆ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ತೆಲಂಗಾಣದ ನೇರಳಪಲ್ಲಿಯಲ್ಲಿ ನಡೆದಿದೆ.

- Advertisement -

ಮೃತ ಮಹಿಳೆಯನ್ನು ನೀಲಮ್ಮ ಎಂದು ಗುರುತಿಸಲಾಗಿದೆ. ಊಟ ಮಾಡುತ್ತಿದ್ದ ಸಂದರ್ಭ ನೀಲಮ್ಮ ಬೇಯಿಸಿದ ಮೊಟ್ಟೆಯನ್ನು ಕತ್ತರಿಸದೇ ಹಾಗೇ ಬಾಯಿಯೊಳಗೆ ಹಾಕಿಕೊಂಡಿದ್ದಾಳೆ.

- Advertisement -

ಈ ಸಂದರ್ಭ ಮೊಟ್ಟೆ ಗಂಟಲಿನಲ್ಲಿ ಸಿಲುಕಿಕೊಂಡಿದೆ. ಮೊಟ್ಟೆ ಗಂಟಲಿನಿಂದ ಕೆಳಗೆ ಜಾರದೇ, ಹೊರಗೆ ಬಾರದೇ ನೀಲಮ್ಮನಿಗೆ ಉಸಿರಾಡಲು ಕಷ್ಟವಾಗಿದ್ದು, ಇದರಿಂದ ಆಕೆ ಮೃತಪಟ್ಟಿದ್ಧಾಳೆ.

- Advertisement -

ಮೊಟ್ಟೆಯನ್ನು ಕತ್ತರಿಸಿ ತಿನ್ನುತ್ತಿದ್ದರೆ ಈ ಅನಾಹುತ ಸಂಭವಿಸುತ್ತಿರಲಿಲ್ಲ ಎಂದು ಕುಟುಂಬಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.

- Advertisment -

Most Popular