Home ಅಂತಾರಾಷ್ಟ್ರೀಯ ದುಬೈ: ಶೇಖ್ ಹಮ್ದಾನ್ ಬಿನ್ ರಶೀದ್ ಅಲ್ ಮಕ್ತೂಮ್ ನಿಧನ

ದುಬೈ: ಶೇಖ್ ಹಮ್ದಾನ್ ಬಿನ್ ರಶೀದ್ ಅಲ್ ಮಕ್ತೂಮ್ ನಿಧನ

ದುಬೈ: ಯುಇಯ ಉಪ ಆಡಳಿತಗಾರ ಮತ್ತು ಹಣಕಾಸು ಮಂತ್ರಿಯಾಗಿ ದೀರ್ಘ ಕಾಲ ಅಧಿಕಾರದಲ್ಲಿದ್ದ ಶೇಖ್ ಹಮ್ದಾನ್ ಬಿನ್ ರಶೀದ್ ಅಲ್ ಮಕ್ತೂಮ್ ನಿಧನರಾಗಿದ್ದಾರೆ.

- Advertisement -

ಈ ಕುರಿತು ದುಬೈ ಆಡಳಿತಗಾರ ಶೇಖ್ ಮುಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು.

- Advertisement -

ಅವರ ಸಹೋದರನಾಗಿರುವ ದುಬೈ ಆಡಳಿತಗಾರ ತನ್ನ ಟ್ವೀಟಿನಲ್ಲಿ “ನಾವು ದೇವನಿಗಾಗಿ ಇರುವವರು. ಅವನ ಬಳಿಗೆ ತೆರಳಬೇಕಾಗಿದೆ. ನನ್ನ ಪ್ರಾರ್ಥನೆ ಎಂದಿಗೂ ನಿನಗಿದೆ ನನ್ನ ಪ್ರೀತಿಯ ಸಹೋದರ” ಎಂದು ಟ್ವೀಟ್ ಮಾಡಿದ್ದಾರೆ.

- Advertisement -

ಡಿಸಂಬರ್ 9, 1971 ರಲ್ಲಿ ಮೊತ್ತ ಮೊದಲ ಕ್ಯಾಬಿನೆಟ್ ರಚನೆಯಾದ ಬಳಿಕ ಅವರು ದೇಶದ ಹಣಕಾಸು ಸಚಿವರಾಗಿ ಅಧಿಕಾರದಲ್ಲಿದ್ದರು.

- Advertisment -

Most Popular