Home ಗಲ್ಫ್ ವಾರ್ತೆ ಯುಎಇ: ಅಬುಧಾಬಿಯ ಮೊದಲ ಹಿಂದೂ ದೇವಾಲಯದ ಕಟ್ಟಡದ ಪ್ರಗತಿಯನ್ನು ಪರಿಶೀಲಿಸಿದ ಶೇಖ್ ಅಬ್ದುಲ್ಲಾ ಬಿನ್ ಜಾಯೆದ್.

ಯುಎಇ: ಅಬುಧಾಬಿಯ ಮೊದಲ ಹಿಂದೂ ದೇವಾಲಯದ ಕಟ್ಟಡದ ಪ್ರಗತಿಯನ್ನು ಪರಿಶೀಲಿಸಿದ ಶೇಖ್ ಅಬ್ದುಲ್ಲಾ ಬಿನ್ ಜಾಯೆದ್.

ಅಬುದಾಭಿ: ವಿದೇಶಾಂಗ ವ್ಯವಹಾರ ಮತ್ತು ಅಂತರರಾಷ್ಟ್ರೀಯ ಸಹಕಾರ ಸಚಿವ ಶೇಖ್ ಅಬ್ದುಲ್ಲಾ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಈ ವಾರದ ಆರಂಭದಲ್ಲಿ ಅಬುಧಾಬಿಯಲ್ಲಿ ಮೊದಲ ಹಿಂದೂ ದೇವಾಲಯವನ್ನು ನಿರ್ಮಿಸುವ ಕೆಲಸ ಮಾಡುತ್ತಿರುವ ಸಂಘಟನೆಯಾದ ಬಿಎಪಿಎಸ್ ಸ್ವಾಮಿ ನಾರಾಯಣ್ ಸಂಸ್ಥೆಯ ಸದಸ್ಯರನ್ನು ವಿದೇಶಾಂಗ ವ್ಯವಹಾರ ಮತ್ತು ಅಂತರರಾಷ್ಟ್ರೀಯ ಸಹಕಾರ ಸಚಿವ ಶೇಖ್ ಅಬ್ದುಲ್ಲಾ ಬಿನ್ ಜಾಯೆದ್ ಅಲ್ ನಹ್ಯಾನ್ ಭೇಟಿಯಾದರು.

- Advertisement -

ಈ ಸಮಯದಲ್ಲಿ ಜಾಗತಿಕ ಸಾಮರಸ್ಯ, ಸಾರ್ವತ್ರಿಕ ಮೌಲ್ಯಗಳು ಮತ್ತು ದೇವಾಲಯದ ಪ್ರಗತಿಯ ಕುರಿತು ಚರ್ಚೆಗಳು ನಡೆದವು.

- Advertisement -

ಅಲ್ ಐನ್‌ನಲ್ಲಿ ನಡೆದ ಸಭೆಯಲ್ಲಿ ಭಾರತದ ರಾಯಭಾರಿ ಪವನ್ ಕಪೂರ್ ಉಪಸ್ಥಿತರಿದ್ದರು.

- Advertisement -

ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ, BAPS ಹೀಗೆ ಬರೆದಿದೆ: “ಕೋವಿಡ್ ಸಾಂಕ್ರಾಮಿಕದ ಈ ಸವಾಲಿನ ಕಾಲದಲ್ಲಿ, ಜಾಗತಿಕ ಸಾಮರಸ್ಯದ ಇಂತಹ ಯೋಜನೆಯು ನಂಬಿಕೆ ಮತ್ತು ಭರವಸೆಯನ್ನು ಪುನರುತ್ಪಾದಿಸುತ್ತದೆ, ಭಾರತ ಮತ್ತು ಯುಎಇಯ ವಿಶಿಷ್ಟ ಸ್ನೇಹವನ್ನು ಮತ್ತು ಪ್ರಗತಿ ಮತ್ತು ಶಾಂತಿಗೆ ಅವರ ಸಮರ್ಪಣೆಯನ್ನು ಆಚರಿಸುತ್ತದೆ.”

ಶೇಖ್ ಅಬ್ದುಲ್ಲಾ ಅವರು ದೇವಾಲಯದ ಪ್ರಗತಿಯ ಬಗ್ಗೆ ಕೇಳಿ ತಿಳಿದುಕೊಂಡರು. ದೇವಾಲಯದ ಕಟ್ಟಡದ ಅಡಿಪಾಯವನ್ನು ಕಳೆದ ಏಪ್ರಿಲ್ನಲ್ಲಿ ಹಾಕಲಾಯಿತು.
ಮಹಂತ್ ಸ್ವಾಮಿ ಮಹಾರಾಜ್ ಪರವಾಗಿ, ಮಂದಿರದ ಚಿನ್ನದ ಸ್ಮಾರಕವನ್ನು ಶೇಖ್ ಅಬ್ದುಲ್ಲಾ ಅವರಿಗೆ ಉಡುಗೊರೆಯಾಗಿ ನೀಡಲಾಯಿತು.

- Advertisment -

Most Popular