Home Travel ಟರ್ಕಿ, ಇರಾನ್, ಪಾಕಿಸ್ತಾನ ಸೇರಿ 11 ರಾಷ್ಟ್ರಗಳ ವೀಸಾ ಸ್ಥಗಿತಗೊಳಿಸಿದ ಯುನೈಟೆಡ್ ಅರಬ್ ಎಮಿರೇಟ್ಸ್

ಟರ್ಕಿ, ಇರಾನ್, ಪಾಕಿಸ್ತಾನ ಸೇರಿ 11 ರಾಷ್ಟ್ರಗಳ ವೀಸಾ ಸ್ಥಗಿತಗೊಳಿಸಿದ ಯುನೈಟೆಡ್ ಅರಬ್ ಎಮಿರೇಟ್ಸ್

ಇಸ್ಲಾಮಾಬಾದ್‌: ‘ ಟರ್ಕಿ, ಇರಾನ್, ಯೆಮೆನ್, ಸಿರಿಯಾ, ಪಾಕಿಸ್ತಾನ ಮತ್ತು ಇತರ 11 ದೇಶಗಳ ಪ್ರವಾಸಿಗರಿಗೆ ಹೊಸ ವೀಸಾಗಳ ವಿತರಣೆಯನ್ನು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ,’ ಎಂದು ಪಾಕಿಸ್ತಾನದ ವಿದೇಶಾಂಗ ಕಚೇರಿ ತಿಳಿಸಿದೆ.

- Advertisement -

ಟರ್ಕಿ, ಇರಾನ್, ಯೆಮೆನ್, ಸಿರಿಯಾ, ಇರಾಕ್, ಸೊಮಾಲಿಯಾ, ಲಿಬಿಯಾ, ಕೀನ್ಯಾ ಮತ್ತು ಅಫ್ಘಾನಿಸ್ತಾನದ ಪ್ರವಾಸಿಗರಿಗೂ ಯುಎಇ ವೀಸಾ ನಿರ್ಬಂಧಿಸಿದೆ.

- Advertisement -

‘ಕೋವಿಡ್-19ರ ಎರಡನೇ ಅಲೆ ಭೀತಿ ಹಿನ್ನೆಲೆಯಲ್ಲಿ ಯುಎಇ ಈ ನಿರ್ಧಾರ ಕೈಗೊಂಡಿದೆ ಎಂದು ನಾವು ಭಾವಿಸಿದ್ದೇವೆ,’ ಎಂದು ಪಾಕಿಸ್ತಾನ ವಿದೇಶಾಂಗ ಕಚೇರಿ ವಕ್ತಾರ ಜಾಹಿದ್ ಹಫೀಜ್ ಚೌಧರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

ಎಮಿರೇಟ್ಸ್ ವಿಮಾನದಲ್ಲಿ ಹಾಂಕಾಂಗ್‌ಗೆ ತೆರಳಿದ್ದ ಸುಮಾರು 30 ಪಾಕಿಸ್ತಾನಿಯರಲ್ಲಿ ಕೊರೊನಾ ವೈರಸ್‌ ಸೋಂಕು ಇದ್ದದ್ದು ಇತ್ತೀಚೆಗೆ ಬೆಳಕಿಗೆ ಬಂದಿತ್ತು. ಇದೇ ಹಿನ್ನೆಲೆಯಲ್ಲಿ ಯುಎಇ ಪಾಕಿಸ್ತಾನದ ಪ್ರವಾಸಿಗರಿಗೆ ವೀಸಾ ನೀಡುವುದನ್ನು ತಾತ್ಕಾಲಿಕವಾಗಿ ತಡೆ ಹಿಡಿದಿದೆ. ಮುಂದಿನ ಆದೇಶದ ವರೆಗೆ ಇದು ಜಾರಿಯಲ್ಲಿರಲಿದೆ.

- Advertisment -

Most Popular