Home ತಂತ್ರಜ್ಞಾನ ಒಂದೇ ತಿಂಗಳಲ್ಲಿ ಭಾರತದ 20.7 ಲಕ್ಷ ಖಾತೆಗಳನ್ನು ನಿಷೇಧಿಸಿದ ವಾಟ್ಸಾಪ್

ಒಂದೇ ತಿಂಗಳಲ್ಲಿ ಭಾರತದ 20.7 ಲಕ್ಷ ಖಾತೆಗಳನ್ನು ನಿಷೇಧಿಸಿದ ವಾಟ್ಸಾಪ್

ನವದೆಹಲಿ: ಹೊಸ ಐಟಿ ನಿಯಮಗಳು 2021 ರ ಪ್ರಕಾರ ಆಗಸ್ಟ್ ತಿಂಗಳಲ್ಲಿ ಭಾರತದಲ್ಲಿ 20.7 ಲಕ್ಷ ಖಾತೆಗಳನ್ನು ನಿಷೇಧಿಸಲಾಗಿದೆ ಎಂದು ಫೇಸ್‌ಬುಕ್ ಒಡೆತನದ ವಾಟ್ಸಾಪ್ ಶುಕ್ರವಾರ ಹೇಳಿದೆ.

- Advertisement -

ಆಗಸ್ಟ್ 1-ಆಗಸ್ಟ್ 31 ರ 30 ದಿನಗಳ ಅವಧಿಯ ಎರಡನೇ ಮಾಸಿಕ ವರದಿಯಲ್ಲಿ ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್) ನಿಯಮಗಳು, 2021ರ ಪ್ರಕಾರ ವಾಟ್ಸಾಪ್ ಭಾರತದ ಬಳಕೆದಾರರಿಂದ 420 ದೂರು-ಕುಂದುಕೊರತೆಗಳನ್ನು ಇ-ಮೇಲ್, ಅಂಚೆ ಮೂಲಕ ಸ್ವೀಕರಿಸಿದ 420 ಕುಂದುಕೊರತೆಗಳನ್ನು ವಾಟ್ಸಾಪ್ ಸ್ವೀಕರಿಸಿದೆ.

- Advertisement -

ಜೂನ್ 16 ರಿಂದ ಜುಲೈ 31 ರ ಅವಧಿಯಲ್ಲಿ ವಾಟ್ಸ್​ಆಯಪ್​ ಹೊಸ ಐಟಿ ನಿಯಮಗಳಿಗೆ ಅನುಸಾರವಾಗಿ ಭಾರತದಲ್ಲಿ 30.2 ಲಕ್ಷ ಖಾತೆಗಳನ್ನು ನಿಷೇಧಿಸಿತ್ತು. ಇದೀಗ ಅಂದರೆ ಆಗಸ್ಟ್ 1 ರಿಂದ ಆಗಸ್ಟ್ 31 ರ 30 ದಿನಗಳ ಅವಧಿಯಲ್ಲಿ 20.7 ಲಕ್ಷ ಖಾತೆಗಳು ಬ್ಯಾನ್‌ ಆಗಿವೆ.

- Advertisement -
- Advertisment -

Most Popular