ನವದೆಹಲಿ: ಕೇಂದ್ರ ಸರ್ಕಾರದ ನೂತನ ಐಟಿ ನಿಯಮಗಳನ್ನು ಪ್ರಶ್ನಿಸಿ ಫೇಸ್ ಬುಕ್ ಒಡೆತನದ ವಾಟ್ಸ್ ಆ್ಯಪ್ ದೆಹಲಿ ಹೈಕೋರ್ಟ್ ನಲ್ಲಿ ದೂರು ದಾಖಲಿಸಿದೆ ಎಂದು ವರದಿ ತಿಳಿಸಿದೆ.
ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯವು ನೂತನ ಐಟಿ ನಿಯಮಗಳನ್ನು ಜಾರಿ ಮಾಡಲು ಸಾಮಾಜಿಕ ಜಾಲತಾಣಗಳಿಗೆ ನೀಡಿರುವ ಗಡುವು ಬುಧವಾರ (26-5-2021) ಮುಗಿಯಲಿದ್ದು, ಇದಕ್ಕೆ ತಡೆ ಕೋರಿ ಕ್ಯಾಲಿಫೋರ್ನಿಯಾ ಮೂಲದ ವಾಟ್ಸಾಪ್ ಕಾನೂನು ಹೋರಾಟಕ್ಕಿಳಿದಿದೆ.
- Advertisement -
“ಮಾಹಿತಿಯ ಪ್ರಾಥಮಿಕ ಮೂಲವನ್ನು ಗುರುತಿಸಲು” ಕೆಲವೊಂದು ನಿಬಂಧನೆಗಳನ್ನು ಮಾಡಬೇಕಾಗಿದೆ, ಈ ಅಂಶವನ್ನು ಪ್ರಶ್ನಿಸಿ ವಾಟ್ಸಾಪ್ ದೆಹಲಿ ಹೈಕೋರ್ಟ್ ಮೊರೆ ಹೋಗಿದೆ