Home ಕ್ರೈಂ ಸುದ್ದಿ ಜಾತಿ ನಿಂದನೆ ಪ್ರಕರಣ:ಯುವರಾಜ್ ಸಿಂಗ್ ಬಂಧನ, ಜಾಮೀನಿನ ಮೇಲೆ ಬಿಡುಗಡೆ

ಜಾತಿ ನಿಂದನೆ ಪ್ರಕರಣ:
ಯುವರಾಜ್ ಸಿಂಗ್ ಬಂಧನ, ಜಾಮೀನಿನ ಮೇಲೆ ಬಿಡುಗಡೆ

ಚಂಡಿಘರ್: ಹರ್ಯಾಣದಲ್ಲಿ ಶನಿವಾರ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಅವರನ್ನು ಬಂಧಿಸಲಾಯಿತು ಮತ್ತು ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು, ಕ್ರಿಕೆಟಿಗ ಯುಜ್ವೇಂದ್ರ ಚಾಹಲ್ ವಿರುದ್ಧ ಇನ್‌ಸ್ಟಾಗ್ರಾಮ್ ಲೈವ್ ವೀಡಿಯೋದಲ್ಲಿ ಅವರು ಜಾತಿವಾದಿ ನಿಂದನೆಯನ್ನು ಬಳಸಿದ್ದಾರೆ ಎಂಬ ದೂರಿನ ತನಿಖೆಯ ಭಾಗವಾಗಿ ಪೊಲೀಸರು ತಿಳಿಸಿದ್ದಾರೆ.

- Advertisement -

ಪರಿಶಿಷ್ಟ ಜಾತಿಯವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಪ್ರಕರಣದಲ್ಲಿ ಹರ್ಯಾಣದ ಹನ್ಸಿಯಲ್ಲಿ ಕ್ರಿಕೆಟಿಗ ಯುವರಾಜ್ ಸಿಂಗ್ ಅವರನ್ನು ಹಿಸಾರ್ ಪೊಲೀಸರು ಬಂಧಿಸಿದ್ದಾರೆ. ಹಂಸಿ ನಗರ ಪೊಲೀಸ್ ಠಾಣೆಯಲ್ಲಿ ಯುವರಾಜ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಕಳೆದ ವರ್ಷ ರೋಹಿತ್ ಶರ್ಮಾ ಜೊತೆ ನೇರ ಸಂವಾದದಲ್ಲಿ ಪರಿಶಿಷ್ಟ ಜಾತಿಯವರಾದ ಯುಜ್ವೇಂದ್ರ ಚಹಲ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎನ್ನುವ ಆರೋಪವಿದೆ.

- Advertisement -

ನ್ಯಾಯಾಲಯದ ಆದೇಶದಂತೆ, ಯುವರಾಜ್ ಸಿಂಗ್ ಅವರನ್ನು ಬಂಧಿಸಲಾಯಿತು ಮತ್ತು ನಂತರ ಶನಿವಾರ ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು ಎಂದು ಹರಿಯಾಣದ ಹನ್ಸಿಯ ಹಿರಿಯ ಪೊಲೀಸ್ ಅಧಿಕಾರಿಯಾದ ನಿತಿಕಾ ಗಹ್ಲೌತ್ ತಿಳಿಸಿದರು.

- Advertisement -

ಹಂಸಿ ಪೊಲೀಸರು ಯುವರಾಜ್ ಸಿಂಗ್ ನನ್ನು ಬಂಧಿಸಿದ ನಂತರ ವಿಚಾರಣೆ ನಡೆಸಿದ್ದು, ಹಿಸಾರ್ ಜಿಯೋ ಮೆಸ್ʼನಲ್ಲಿ ಪ್ರಶ್ನಿಸಲಾಯಿತು. ನಂತರ ಹೈಕೋರ್ಟ್ ಆದೇಶದ ಮೇರೆಗೆ ಯುವರಾಜ್ ಸಿಂಗ್ ಅವರನ್ನ ಔಪಚಾರಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಈ ಪ್ರಕರಣದಲ್ಲಿ, ಕೆಲವು ದಿನಗಳ ಹಿಂದೆ, ಹೈಕೋರ್ಟ್ ಯುವರಾಜ್ ಸಿಂಗ್ʼಗೆ ನಿರೀಕ್ಷಣಾ ಜಾಮೀನು ನೀಡಿತ್ತು. ಈ ಕಾರಣದಿಂದಾಗಿ, ಹಂಸಿ ಪೊಲೀಸರು ಅವರನ್ನು ಔಪಚಾರಿಕವಾಗಿ ಬಂಧಿಸಿ, ಅವರನ್ನ ವಿಚಾರಣೆ ನಡೆಸಿ ನಂತರ ನಿರೀಕ್ಷಣಾ ಜಾಮೀನು ಪತ್ರಗಳ ಆಧಾರದ ಮೇಲೆ ಬಿಡುಗಡೆ ಮಾಡಿದ್ದಾರೆ.

- Advertisment -

Most Popular