Home ನಮ್ಮ ಕರಾವಳಿ ವಿಟ್ಲ: 10 ಅಡಿ ಆಳಕ್ಕೆ ಉರುಳಿ ಬಿದ್ದ ಕಾರು: ಮೂವರಿಗೆ ಗಾಯ

ವಿಟ್ಲ: 10 ಅಡಿ ಆಳಕ್ಕೆ ಉರುಳಿ ಬಿದ್ದ ಕಾರು: ಮೂವರಿಗೆ ಗಾಯ

ಬಂಟ್ವಾಳ: ಚಾಲಕನ ನಿಯಂತ್ರಣ ಕಳೆದುಕೊಂಡ ಕಾರೊಂದು ರಸ್ತೆ ಬದಿಯ ಮನೆಯಂಗಳಕ್ಕೆ ಉರುಳಿದ ಪರಿಣಾಮ ಮೂವರು ಗಾಯಗೊಂಡ ಘಟನೆ ಕನ್ಯಾನ ಗ್ರಾಮದ ಪಂಜಾಜೆ ಎಂಬಲ್ಲಿ ನಡೆದಿದೆ.

- Advertisement -

ಮಂಚಿಯಿಂದ ಕನ್ಯಾನಕ್ಕೆ ಕುಡ್ತಮುಗೇರು ಕುಳಾಲು ಕನ್ಯಾನ ಮಾರ್ಗದಲ್ಲಿ ಆಗಮಿಸುತ್ತಿದ್ದ ಕಾರು ಕನ್ಯಾನ ಗ್ರಾಮದ ಪಂಜಾಜೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ, ರಾಧಾಕೃಷ್ಣ ಕನ್ಯಾನ ಅವರ ಮನೆಯಂಗಳಕ್ಕೆ ಬಿದ್ದಿದ್ದು, ಮೂವರು ಪ್ರಯಾಣಿಕರಿಗೆ ಗಾಯಗಳಾಗಿವೆ.

- Advertisement -

ಸುಮಾರು ಹತ್ತು ಅಡಿ ಆಳಕ್ಕೆ ಕಾರು ಬಿದ್ದಿದೆ. ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಪಕ್ಕದಲ್ಲೇ ಬಾವಿಯಿದ್ದು ಸ್ವಲ್ಪದರಲ್ಲೇ ಭಾರೀ ಅಪಘಾತ ತಪ್ಪಿಹೋಗಿದೆ.

- Advertisement -
- Advertisment -

Most Popular