Home ನಮ್ಮ ಕರಾವಳಿ ಬಂದರ್ ವಾರ್ಡಿನಲ್ಲಿ ಕಸದ ರಾಶಿ: ಸ್ಥಳೀಯ ಜನಪ್ರತಿನಿಧಿಗಳಿಂದ ನಿರ್ಲಕ್ಷ್ಯ:ಸಾರ್ವಜನಿಕರಿಂದ ಸ್ವಚ್ಛತಾ ಕಾರ್ಯಕ್ರಮ

ಬಂದರ್ ವಾರ್ಡಿನಲ್ಲಿ ಕಸದ ರಾಶಿ: ಸ್ಥಳೀಯ ಜನಪ್ರತಿನಿಧಿಗಳಿಂದ ನಿರ್ಲಕ್ಷ್ಯ:
ಸಾರ್ವಜನಿಕರಿಂದ ಸ್ವಚ್ಛತಾ ಕಾರ್ಯಕ್ರಮ

ಮಂಗಳೂರು: ಬಂದರ್ ವಾರ್ಡ್ ನಲ್ಲಿ ಹಲವಾರು ದಿನಗಳಿಂದ ಸ್ಥಳೀಯ ಜನಪ್ರತಿನಿಧಿ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ರಸ್ತೆ ಬದಿಯಲ್ಲಿ ರಾಶಿ ಹಾಕಲಾದ ಕಸಗಳನ್ನು, ಕಸ ವಿಲೇವಾರಿ ವಾಹನದ ಸಹಕಾರದಿಂದ ಸಾರ್ವಜನಿಕರು ಸ್ವಚ್ಛಗೊಳಿಸಿದರು.

- Advertisement -

ಬಂದರ್ ಪರಿಸರದಲ್ಲಿ ಈ ಕಸದ ರಾಶಿಯಿಂದ ಹಲವಾರು ರೋಗಗಳು ಹರಡುತ್ತಿದ್ದು, ಈ ಬಗ್ಗೆ ಹಲವು ದಿನಗಳಿಂದ ಸಾರ್ವಜನಿಕರು ಸ್ಥಳೀಯ ಜನಪ್ರತಿನಿಧಿಗಳಿಗೆ ಮಾಹಿತಿ ನೀಡುತ್ತಿದ್ದು, ಯಾವುದೇ ಪ್ರತಿಕ್ರಿಯೆ ಲಭಿಸಿರಲಿಲ್ಲ. ಇದರಿಂದ ಬೇಸತ್ತ ಬಂದರ್ ವಾರ್ಡಿನ ಯುವಕರು, ಪ್ರತಿಭಟನಾ ಭಾಗವಾಗಿ ಸ್ವಯಂ ಕಾರ್ಯಾಚರಣೆಗೆ ಇಳಿದಿದ್ದು, ಆದಿತ್ಯವಾರ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದರು.

- Advertisement -

ಬಂದರ್ ಪರಿಸರದ ಈ ಸ್ವಚ್ಛತಾ ಕಾರ್ಯವನ್ನು ಮಾಡಿದ ಯುವಕರು ಈ ಸ್ವಚ್ಛತೆಯನ್ನು ಮುಂದುವರಿಸಲು ತೀರ್ಮಾನಿಸಿದ್ದು, ಇನ್ನು ಮುಂದೆ ಸಾರ್ವಜನಿಕ ಸ್ಥಳಗಳಲ್ಲಿ ಯಾರಾದರೂ ಕಸ ಹಾಕಿದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗುವುದೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಅದೇ ರೀತಿ ಸ್ವಚ್ಚತೆಯನ್ನು ಕಾಪಾಡಲು ಸಾರ್ವಜನಿಕರಲ್ಲಿ ವಿನಂತಿಸಲಾಗಿದೆ.

- Advertisement -
- Advertisment -

Most Popular