Home ಕ್ರೈಂ ಸುದ್ದಿ ತುಮಕೂರು: ಖಾಸಗಿ ಬಸ್ ಹಾಗೂ ಟಾಟಾ ಏಸ್ ನಡುವೆ ಭೀಕರ ಅಪಘಾತ: ನಾಲ್ವರು ಮೃತ್ಯು

ತುಮಕೂರು: ಖಾಸಗಿ ಬಸ್ ಹಾಗೂ ಟಾಟಾ ಏಸ್ ನಡುವೆ ಭೀಕರ ಅಪಘಾತ: ನಾಲ್ವರು ಮೃತ್ಯು

ತುಮಕೂರು: ನಗರದ ಹೊರ ವಲಯದ ಗುಬ್ಬಿ ರಸ್ತೆಯ ಸಿದ್ಧಾರ್ಥ ನಗರದ ಸಮೀಪ ಖಾಸಗಿ ಬಸ್ ಹಾಗೂ ಟಾಟಾ ಏಸ್ ವಾಹನದ ನಡುವೆ ಭಾನುವಾರ ಬೆಳಿಗ್ಗೆ ಅಪಘಾತವಾಗಿದೆ. ದುರಂತದಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಮೃತರ ವಿವರಗಳು ಇನ್ನೂ ಲಭ್ಯವಾಗಿಲ್ಲ.

- Advertisement -

ಮಾರುಕಟ್ಟೆಯಿಂದ ಹೂವು ತುಂಬಿಕೊಂಡು ಗುಬ್ಬಿ ಕಡೆಗೆ ಹೋಗುತ್ತಿದ್ದ ಟಾಟಾ ಏಸ್‌ ಹಾಗೂ ಬೆಂಗಳೂರಿಗೆ ತೆರಳುತ್ತಿದ್ದ ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಟಾಟಾ ಏಸ್‌ನಲ್ಲಿದ್ದವರು ಮೃತಪಟ್ಟಿದ್ದಾರೆ.

- Advertisement -

ಅಪಘಾತ ಸಂಭವಿಸುತ್ತಿದ್ದಂತೆ ಹೆಗ್ಗೆರೆ ಜನರು ನೆರವಿಗೆ ಬಂದು, ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿದರು. ಬಸ್‌ನಲ್ಲಿ ಇದ್ದ ಪ್ರಯಾಣಿಕರು ತುಮಕೂರು ಬಸ್ ನಿಲ್ದಾಣಕ್ಕೆ ತೆರಳಲು ನೆರವಾದರು

- Advertisement -
- Advertisment -

Most Popular