Home ಶಿಕ್ಷಣ 2020-21ನೇ ಸಾಲಿನ ಬೇಸಿಗೆ ರಜೆ ಹಾಗೂ 2021-22ನೇ ಸಾಲಿನ ಶೈಕ್ಷಣಿಕ ವರ್ಷಾರಂಭದ ತಾತ್ಕಾಲಿಕ ಪರಿಷ್ಕೃತ ವೇಳಾಪಟ್ಟಿ...

2020-21ನೇ ಸಾಲಿನ ಬೇಸಿಗೆ ರಜೆ ಹಾಗೂ 2021-22ನೇ ಸಾಲಿನ ಶೈಕ್ಷಣಿಕ ವರ್ಷಾರಂಭದ ತಾತ್ಕಾಲಿಕ ಪರಿಷ್ಕೃತ ವೇಳಾಪಟ್ಟಿ ಬಿಡುಗಡೆ!

ಬೆಂಗಳೂರು: ಕೋವಿಡ್-19ರ ಹಿನ್ನಲೆಯಲ್ಲಿ 2020-21ನೇ ಸಾಲಿನ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯನ್ನು ಮುಂದೂಡಲಾಗಿದೆ. ಮುಂದುವರೆದು ಮೇ 7ರ ಬೆಳಿಗ್ಗೆ 6 ಗಂಟೆಯವರೆಗೆ ರಾಜ್ಯದಲ್ಲಿ ಲಾಕ್ ಡೌನ್ ವಿಸ್ತರಿಸಿ, ಆದೇಶಿಸಲಾಗಿದೆ. ಈ ಅಂಶಗಳ ಹಿನ್ನಲೆಯಲ್ಲಿ ಶಾಲೆಗಳಿಗೆ 2020-21ನೇ ಸಾಲಿನ ಬೇಸಿಗೆ ರಜಾ ಅವಧಿಯನ್ನು ಈ ಹಿಂದೆ ನಿಗದಿ ಪಡಿಸಿರುವುದನ್ನು ಮಾರ್ಪಡಿಸಿ, ಈ ಕೆಳಗಿನಂತೆ ಮರುನಿಗದಿ ಪಡಿಸಲಾಗಿದೆ.

- Advertisement -

2020-21ನೇ ಸಾಲಿನ ಬೇಸಿಗೆ ರಜೆ ಹಾಗೂ 2021-22ನೇ ಸಾಲಿನ ಶೈಕ್ಷಣಿಕ ವರ್ಷಾರಂಭದ ತಾತ್ಕಾಲಿಕ ಪರಿಷ್ಕೃತ ವೇಳಾಪಟ್ಟಿ

• ಪ್ರಾಥಮಿಕ ಶಾಲೆಗಳಿಗೆ – ಯಾವುದೇ ಬದಲಾವಣೆ ಇರುವುದಿಲ್ಲ
• ಪ್ರೌಢ ಶಾಲೆಗಳಿಗೆ ದಿನಾಂಕ 14-06-2021ರವರೆಗೆ ಬೇಸಿಗೆ ರಜೆಯನ್ನು ವಿಸ್ತರಿಸಿದೆ.
• ರಜಾ ಅವಧಿಯಲ್ಲಿ 2020-21ನೇ ಸಾಲಿನ 10ನೇ ತರಗತಿ ( ಎಸ್ ಎಸ್ ಎಲ್ ಸಿ) ವಿದ್ಯಾರ್ಥಿಗಳೊಂದಿಗೆ ಸಂಬಂಧಿಸಿದ ಶಿಕ್ಷಕರು ಕಲಿಕಾ ವಿಷಯಕ್ಕೆ ಸಂಬಂಧಿಸಿದಂತೆ ದೂರವಾಣಿ ಮೂಲಕ ಸಂಪರ್ಕದಲ್ಲಿದ್ದು, ವಿದ್ಯಾರ್ಥಿಗಳ ಕ್ಷಿಷ್ಟಾಂಶಗಳನ್ನು ದೂರವಾಣಿ, ಆನ್ ಲೈನ್ ಮೂಲಕ ಪರಿಹರಿಸುವುದು ಹಾಗೂ ಮಾರ್ಗದರ್ಶನ ನೀಡುವುದು.
ದಿನಾಂಕ 15-06-2021 ರಿಂದ 2021-22ನೇ ಸಾಲಿನ ಪ್ರೌಢ ಶಾಲೆಗಳ 8, 9 ಮತ್ತು 10ನೇ ತರಗತಿಗಳ ಶೈಕ್ಷಣಿಕ ವರ್ಷ ಪ್ರಾರಂಭ.

- Advertisement -
- Advertisment -

Most Popular