Home ಅಂತಾರಾಷ್ಟ್ರೀಯ ಫೇಸ್‌ಬುಕ್‌, ವಾಟ್ಸ್‌ಆ್ಯಪ್, ಮೆಸೆಂಜರ್, ಇನ್‌ಸ್ಟಾಗ್ರಾಂ ನಿಷ್ಕ್ರಿಯ:ಬಳಕೆದಾರರ ಕ್ಷಮೆ ಕೇಳಿದ ಫೇಸ್ಬುಕ್ ಸಿಇಒ

ಫೇಸ್‌ಬುಕ್‌, ವಾಟ್ಸ್‌ಆ್ಯಪ್, ಮೆಸೆಂಜರ್, ಇನ್‌ಸ್ಟಾಗ್ರಾಂ ನಿಷ್ಕ್ರಿಯ:
ಬಳಕೆದಾರರ ಕ್ಷಮೆ ಕೇಳಿದ ಫೇಸ್ಬುಕ್ ಸಿಇಒ

ಬೆಂಗಳೂರು: ಜನಪ್ರಿಯ ಫೇಸ್‌ಬುಕ್‌, ವಾಟ್ಸ್‌ಆ್ಯಪ್, ಮೆಸೆಂಜರ್ ಹಾಗೂ ಇನ್‌ಸ್ಟಾಗ್ರಾಂ ಕಳೆದ ದಿನ ಸಂಜೆಯಿಂದ ರಾತ್ರಿಯವರೆಗೆ ಕೆಲಸ ಮಾಡದಿರುವುದಕ್ಕೆ ಬೇಸರ ವ್ಯಕ್ತಪಡಿಸಿ ಫೇಸ್‌ಬುಕ್‌ ಸಿಇಓ ಮಾರ್ಕ್ ಜುಕರಬರ್ಗ್ ಬಳಕೆದಾರರಲ್ಲಿ ವೈಯಕ್ತಿಕವಾಗಿ ಕ್ಷಮಾಪಣೆ ಕೇಳಿದ್ದಾರೆ.

- Advertisement -

ಈ ಕುರಿತು ಮಂಗಳವಾರ ಫೇಸ್‌ಬುಕ್‌ ಪೋಸ್ಟ್ ಹಾಕಿರುವ ಅವರು, ‘ಫೇಸ್‌ಬುಕ್‌, ಇನ್ಸ್ಟಾಗ್ರಾಂ, ಮೆಸೆಂಜರ್ ಹಾಗೂ ವಾಟ್ಸ್‌ಆ್ಯಪ್ ಸಹಜ ಸ್ಥಿತಿಗೆ ಬಂದಿವೆ. ಈ ದಿನದ ಅನಾನುಕೂಲಕ್ಕೆ ನಾನು ನಿಮ್ಮ ಬಳಿ ಕ್ಷಮೆ ಕೇಳುತ್ತೇನೆ. ನೀವು ನಿಮ್ಮ ಪ್ರೀತಿ ಪಾತ್ರರ ಜೊತೆ ಸಂಪರ್ಕದಲ್ಲಿರಲು ನಮ್ಮ ಸೇವೆಯ ಜೊತೆ ಎಷ್ಟೊಂದು ಸಂಬಂಧ ಹೊಂದಿದ್ದಿರಾ ಎಂಬುದನ್ನು ನಾನು ಬಲ್ಲೆ’ ಎಂದು ಮಾರ್ಕ್ ಹೇಳಿದ್ದಾರೆ.

- Advertisement -

2019 ರಿಂದ ಫೇಸ್‌ಬುಕ್‌ ಸರ್ವರ್‌ನಲ್ಲಿ ಅತಿ ಹೆಚ್ಚು ಸಮಯ ವ್ಯತ್ಯಯ ಕಾಣಿಸಿಕೊಂಡಿದ್ದು ಇದೇ ಮೊದಲ ಬಾರಿಗೆ ಎಂದು ಅಂತರರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

- Advertisement -

ಜಾಗತಿಕವಾಗಿ ಫೇಸ್‌ಬುಕ್‌ನ ಸಾಮಾಜಿಕ ಮಾಧ್ಯಮ ಆ್ಯಪ್‌ಗಳಲ್ಲಿ ವ್ಯತ್ಯಯ ಎದುರಾಗುತ್ತಿದ್ದಂತೆ ಅಮೆರಿಕ ಷೇರುಪೇಟೆಯಲ್ಲಿ ಫೇಸ್‌ಬುಕ್‌ ಷೇರು ಬೆಲೆ ಶೇ 5ರಷ್ಟು ಕುಸಿತ ಕಂಡಿತು. ಆ್ಯಪ್‌ಗಳ ಸೇವೆ ಪುನರಾರಂಭವಾಗುತ್ತಿದ್ದಂತೆ ಫೇಸ್‌ಬುಕ್‌ ಸಂಸ್ಥಾಪಕ ಮಾರ್ಕ್‌ ಜುಕರ್ಬರ್ಗ್ ಕ್ಷಮೆಯಾಚಿಸಿದ್ದಾರೆ.

- Advertisment -

Most Popular