Home ಅಂತಾರಾಷ್ಟ್ರೀಯ ಶಾಹೀನ್‌ ಚಂಡಮಾರುತಕ್ಕೆ 13 ಮಂದಿ ಮೃತ್ಯು

ಶಾಹೀನ್‌ ಚಂಡಮಾರುತಕ್ಕೆ 13 ಮಂದಿ ಮೃತ್ಯು

ದುಬೈ: ಒಮನ್‌ ಕರಾವಳಿಗೆ ರವಿವಾರ ಅಪ್ಪಳಿಸಿರುವ ಶಹೀನ್‌ ಚಂಡಮಾರುತವು ಈವರೆಗೆ 13 ಮಂದಿಯನ್ನು ಬಲಿಪಡೆದುಕೊಂಡಿದೆ.

- Advertisement -

ಗಂಟೆಗೆ 150 ಕಿ.ಮೀ. ವೇಗದಲ್ಲಿ ಬಿರುಗಾಳಿ ಬೀಸುತ್ತಾ, ಭಾರೀ ಮಳೆಯಾಗುತ್ತಿದ್ದು, ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಇರಾನ್‌ನಲ್ಲಿ ಐವರು ಮೀನುಗಾರರು ನಾಪತ್ತೆಯಾಗಿದ್ದು, ಆ ಪೈಕಿ ಇಬ್ಬರನ್ನು ರಕ್ಷಿಸಲಾಗಿದೆ.

- Advertisement -

ಚಂಡಮಾರುತಕ್ಕೂ ಮುನ್ನ ಮರಳು ಬಿರುಗಾಳಿ ಬೀಸಿದ್ದು, ಕಣ್ಣು, ಹೃದಯ ಹಾಗೂ ಶ್ವಾಸಕೋಶ ಸಂಬಂಧಿ ಸಮಸ್ಯೆಗಳಿಂದಾಗಿ 122 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

- Advertisement -
- Advertisment -

Most Popular