Home ರಾಷ್ಟ್ರೀಯ ಕೇರಳ: ಭಾರೀ ಮಳೆ, ಅಪಾರ ನಾಶ-ನಷ್ಟ:9 ಮಂದಿ ಮೃತ್ಯು

ಕೇರಳ: ಭಾರೀ ಮಳೆ, ಅಪಾರ ನಾಶ-ನಷ್ಟ:
9 ಮಂದಿ ಮೃತ್ಯು

ಕಾಸರಗೋಡು: ಅನಿರೀಕ್ಷಿತ ಪ್ರವಾಹದಿಂದ ಕೇರಳ ತತ್ತರಿಸಿದೆ. ಕೇರಳ ಮಧ್ಯ ಮತ್ತು ದಕ್ಷಿಣ ಜಿಲ್ಲೆಗಳು ಭಾರೀ ಮಳೆ ಮತ್ತು ಪ್ರವಾಹದಿಂದ ತೀವ್ರವಾಗಿ ಹಾನಿಗೊಳಗಾಗಿವೆ. ಪ್ರವಾಹವು ಕೊಟ್ಟಯಂ ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ಪರಿಣಾಮ ಬೀರಿದ್ದು, ಭೂಕುಸಿತ ಮತ್ತು ಮಣ್ಣು ಕುಸಿತದಿಂದ ಅನೇಕ ಜೀವಗಳು ಇದೀಗಾಗಲೇ ಬಲಿಯಾಗಿವೆ.

- Advertisement -

ಮುಂಗಾರು ಮಳೆಯಿಂದಾಗಿ ರಾಜ್ಯದಲ್ಲಿ ಇದುವರೆಗೆ ಒಂಬತ್ತು ಸಾವುಗಳು ವರದಿಯಾಗಿವೆ. ಕಾಂಜಾರ್ ನಲ್ಲಿ ಕಾರು ನೀರಿನಲ್ಲಿ ಬಿದ್ದು ಇಬ್ಬರು ಸಾವನ್ನಪ್ಪಿದ್ದು, ಕೊಟ್ಟಯಂನಲ್ಲಿ ಭೂಕುಸಿತದಲ್ಲಿ 7 ಮಂದಿ ಸಾವನ್ನಪ್ಪಿದ್ದಾರೆ. ಕೂತಟ್ಟುಕುಲಂನ ನಿಖಿಲ್ (32) ಉನ್ನಿಕೃಷ್ಣನ್ (38) ಮತ್ತು ಇವರ ಸಹಚರ ನಿಮಾ ವಿಜಯನ್ (30) ಸಾವೀಗಿಡಾಗಿದ್ದಾರೆ.

- Advertisement -

ಕೆಲವು ಕಡೆಗಳಲ್ಲಿ ಭೂ ಕುಸಿತ ಉಂಟಾಗಿದ್ದು, ಇಂದು ಉಂಟಾದ ಭೂಕುಸಿತದಲ್ಲಿ 15 ಜನರು ನಾಪತ್ತೆಯಾಗಿದ್ದಾರೆ. ಏಳು ಜನರ ಶವ ಪತ್ತೆಯಾಗಿದೆ. ಚೋಳತಡಂ ಕೂಟಿಕಲ್ ಗ್ರಾಮದ ಪ್ಲಾಪಲ್ಲಿ ಪ್ರದೇಶದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಒಟ್ಟಲಂಗಲ್ ಮಾರ್ಟಿನ್ ಅವರ ಇಡೀ ಕುಟುಂಬವು ಮೃತಪಟ್ಟಿದೆ. ಮಾರ್ಟಿನ್, ಆತನ ತಾಯಿ ಅನ್ನಕುಟ್ಟಿ, ಮಾರ್ಟಿನ್ ಪತ್ನಿ ಸಿನಿ ಮತ್ತು ಮಕ್ಕಳಾದ ಸ್ನೇಹಾ ಸೋನಾ ಮತ್ತು ಸಾಂದ್ರಾ ಸಂತ್ರಸ್ತರಲ್ಲಿ ಸೇರಿದ್ದಾರೆ. ಕ್ಲಾರಮ್ಮ ಜೋಸೆಫ್ (65), ಸಿನಿ (35) ಮತ್ತು ಸಿನಿ ಮಗಳು ಸೋನಾ (10) ಅವರ ಮೃತದೇಹಗಳನ್ನು ಮೊದಲು ಗುರುತಿಸಲಾಗಿದೆ. ಮನೆಯ ಮೇಲ್ಛಾವಣಿಯಲ್ಲಿನ ಭೂಕುಸಿತದಲ್ಲಿ ಅವರ ಮನೆ ಕೊಚ್ಚಿ ಹೋಗಿದೆ ಎಂದು ತಿಳಿದು ಬಂದಿದೆ.

- Advertisement -
- Advertisment -

Most Popular