Home ನಮ್ಮ ರಾಜ್ಯ ಸ್ವಯಂ ಸೇವಕ ಆದಾಗ ಮಾತ್ರ ಆರ್‌ಎಸ್‌ಎಸ್‌ ಏನು ಎಂದು ಅರ್ಥವಾಗುತ್ತದೆ:ಎಚ್.ಡಿ ಕುಮಾರ ಸ್ವಾಮಿ ಹೇಳಿಕೆ ತಿರುಗೇಟು...

ಸ್ವಯಂ ಸೇವಕ ಆದಾಗ ಮಾತ್ರ ಆರ್‌ಎಸ್‌ಎಸ್‌ ಏನು ಎಂದು ಅರ್ಥವಾಗುತ್ತದೆ:
ಎಚ್.ಡಿ ಕುಮಾರ ಸ್ವಾಮಿ ಹೇಳಿಕೆ ತಿರುಗೇಟು ನೀಡಿದ ಸಿ.ಟಿ ರವಿ

ಚಿಕ್ಕಮಗಳೂರು: ಎಚ್.ಡಿ.ಕುಮಾರಸ್ವಾಮಿ ಅವರು ಆರ್‌ಎಸ್‌ಎಸ್‌ ಏನು ಎನ್ನುವುದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿಲ್ಲ. ಯಾವುದೊ ಪುಸ್ತಕ ಓದಿ ತಿಳಿದುಕೊಂಡೆ ಎಂದು ಹೇಳಿದ್ದಾರೆ, ಒಬ್ಬೊಬ್ಬರು ಒಂದೊಂದು ರೀತಿ ಅರ್ಥೈಸಿ ಪುಸ್ತಕ ಬರೆಯುತ್ತಾರೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಕುಟುಕಿದರು.

- Advertisement -

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ. ರವಿ, ‘ಸ್ವಯಂ ಸೇವಕ ಆದಾಗ ಮಾತ್ರ ಆರ್‌ಎಸ್‌ಎಸ್‌ ಏನು ಎಂದು ಅರ್ಥವಾಗುತ್ತದೆ. ಆರ್‌ಎಸ್ಎಸ್‌ನಲ್ಲಿ ಸದಸ್ಯತ್ವ ಇಲ್ಲ, ಅಲ್ಲಿರುವುದು ಸ್ವಯಂ ಸೇವಕತ್ವ. ಈ ಸ್ವಯಂ ಸೇವಕತ್ವಕ್ಕೆ ಸದಸ್ಯತ್ವ, ನವೀಕರಣ, ಮಾಸಿಕ ಶುಲ್ಕ ಇಲ್ಲ. ಆರ್‌ಎಸ್‌ಎಸ್‌ ಸದಸ್ಯರಾದವರು ಸಿಂಡಿಕೇಟ್‌ನಲ್ಲಿ ಇದ್ದಾರೆ ಎಂದು ಅವರು ಹೇಳಿರುವುದೇ ಅಜ್ಞಾನ ತೋರಿಸುತ್ತದೆ’ ಎಂದು ವ್ಯಂಗ್ಯವಾಡಿದರು.

- Advertisement -
- Advertisment -

Most Popular