Home ನಮ್ಮ ಕರಾವಳಿ ಕರಾವಳಿಯಾದ್ಯಂತ ಮಳೆ ಅಬ್ಬರ: ಮಂಗಳೂರು, ಸುಳ್ಯ, ವಿಟ್ಲ, ಪುತ್ತೂರು ಬಂಟ್ವಾಳ, ಬೆಳ್ತಂಗಡಿ ಭಾಗಗಳಲ್ಲಿ ಜನಜೀವನ ಅಸ್ತವ್ಯಸ್ತ

ಕರಾವಳಿಯಾದ್ಯಂತ ಮಳೆ ಅಬ್ಬರ: ಮಂಗಳೂರು, ಸುಳ್ಯ, ವಿಟ್ಲ, ಪುತ್ತೂರು ಬಂಟ್ವಾಳ, ಬೆಳ್ತಂಗಡಿ ಭಾಗಗಳಲ್ಲಿ ಜನಜೀವನ ಅಸ್ತವ್ಯಸ್ತ

ಮಂಗಳೂರು: ಕರಾವಳಿಯಾದ್ಯಂತ ಅಕ್ಟೋಬರ್‌ 16ರ ಶನಿವಾರ ಅಪರಾಹ್ನ ಹಾಗೂ ಸಂಜೆ ಉತ್ತಮ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.

- Advertisement -

ಸುಳ್ಯ, ವಿಟ್ಲ, ಪುತ್ತೂರು ವಿವಿಧ ಭಾಗಗಳಲ್ಲಿ ಭಾರೀ ಮಳೆ ಸುರಿದಿದೆ. ಬಂಟ್ವಾಳ, ಬೆಳ್ತಂಗಡಿ, ಮಂಗಳೂರು ತಾಲೂಕುಗಳಲ್ಲಿ ಹಗಲು ಮೋಡ ಕವಿದ ವಾತಾವರಣ ಇತ್ತು. ಸಂಜೆಯ ವೇಳೆ ಮಣಿಪಾಲ, ಉಡುಪಿ, ಶಿರ್ವ, ಕಟಪಾಡಿ, ಕಲ್ಯಾಣಪುರ, ಸಂತೆಕಟ್ಟೆ ಸೇರಿದಂತೆ ವಿವಿಧೆಡೆ ಭಾರೀ ಮಳೆಯಾಗಿದೆ.
ಭಾರೀ ಮಳೆಯ ಪರಿಣಾಮ ಉಡುಪಿಯ ಕಲ್ಸಂಕ, ಕರಾವಳಿ ಜಂಕ್ಷನ್‌‌ನಲ್ಲಿ ಟ್ರಾಫಿಕ್‌‌ ಜಾಮ್‌‌‌ ಕಂಡುಬಂದಿದೆ. ಕಾರ್ಕಳ ಹಾಗೂ ಕುಂದಾಪುರ ತಾಲೂಕಿನಲ್ಲಿ ಲಘು ಪ್ರಮಾಣದಲ್ಲಿ ಮಳೆಯಾಗಿದೆ.
ಧರ್ಮಸ್ಥಳದಲ್ಲಿ ಒಂದೂವರೆ ಗಂಟೆಗೂ ಹೆಚ್ಚು ಕಾಲ ಸಂಚಾರವನ್ನು ನಿರ್ಬಂಧಿಸಲಾಯಿತು. ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೂರು ವಿಮಾನಗಳು ಇಳಿಯಲು ಸಾಧ್ಯವಾಗಲಿಲ್ಲ ಮತ್ತು ಅವುಗಳನ್ನು ಬೆಂಗಳೂರಿಗೆ ತಿರುಗಿಸಲಾಯಿತು.
ಮುಂದಿನ ನಾಲ್ಕು ದಿನಗಳಲ್ಲಿ ಕೇರಳ ಮತ್ತು ಕರಾವಳಿ ಕರ್ನಾಟಕದಲ್ಲಿ ನಿರಂತರ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

- Advertisement -

ಪಡೀಲ್‌ ಅಂಡರ್‌ ಪಾಸ್‌‌‌‌‌‌ನಲ್ಲಿ ನೀರು ತುಂಬಿದ್ದು, ವಾಹನಗಳು ನಿಧಾನವಾಗಿ ಚಲಿಸುತ್ತಿವೆ. ಕೊಡಿಯಾಲಬೈಲ್‌‌ ಅಕ್ಕಪಕ್ಕದ ಕೆಲವು ಭಾಗಗಲ್ಲಿ ಚರಂಡಿ ತುಂಬಿ ರಸ್ತೆಯಲ್ಲಿ ನೀರು ಹರಿದಿದೆ. ತಡರಾತ್ರಿಯವರೆಗೂ ಮಳೆ ಮುಂದುವರಿದಿತ್ತು.

- Advertisement -


ಮಂಗಳೂರಿಗೆ ಶನಿವಾರ ಸಂಜೆ 7 ಗಂಟೆಯಿಂದ ರಾತ್ರಿ 9ರ ನಡುವೆ ಚೆನ್ನೈ, ಹೈದರಾಬಾದ್‌‌ ಹಾಗೂ ಬೆಂಗಳೂರಿನಿಂದ ಆಗಮಿಸಿದ ಮೂರು ವಿಮಾನಗಳು ಮಳೆ ಕಾರಣಕ್ಕೆ ಇಲಿಯಲಾಗದೇ ಬೆಂಗಳೂರಿಗೆ ವಾಪಾಸ್ಸಾಗಿವೆ.
ವೆಂಕಟರಮಣ ದೇವಸ್ಥಾನದ ಆಚಾರ್ಯ ಮಠದ ವಸಂತ ಮಂಟಪದಲ್ಲಿ 99ನೇ ವರ್ಷದ ಶಾರದ ಮಹೋತ್ಸವದಲ್ಲಿ ಪೂಜಿಸಿದ ಶಾರದಾ ಮಾತೆಯ ವಿಸರ್ಜನಾ ಮೆರವಣಿಗೆಯು ಮಳೆಯ ಕಾರಣದಿಂದ ವಿಳಂಬವಾಗಿ ಸಾಗಿತು.

- Advertisment -

Most Popular