Home ನಮ್ಮ ಕರಾವಳಿ ಪ್ರತಿದಿನ ವೆಬ್ ಸೈಟ್ ಗೆ 4 ತಿಂಗಳ ಸಂಭ್ರಮ: 20 ಲಕ್ಷ ದಾಟಿದ ಓದುಗರ ಸಂಖ್ಯೆ:...

ಪ್ರತಿದಿನ ವೆಬ್ ಸೈಟ್ ಗೆ 4 ತಿಂಗಳ ಸಂಭ್ರಮ: 20 ಲಕ್ಷ ದಾಟಿದ ಓದುಗರ ಸಂಖ್ಯೆ: 2.27 ಲಕ್ಷ ಶಾಶ್ವತ ಓದುಗರು

ನ್ಯೂಸ್ ಡೆಸ್ಕ್: ದ.ಕ. ಜಿಲ್ಲೆಯನ್ನು ಕೇಂದ್ರವಾಗಿರಿಸಿಕೊಂಡು ಪ್ರಾರಂಭಿಸಲಾದ ‘ಪ್ರತಿದಿನ’ ವೆಬ್ ಫೋರ್ಟಲ್  ನಾಲ್ಕು ತಿಂಗಳು ಪೂರ್ತಿಗೊಳಿಸಿದೆ. ನಾಲ್ಕು ತಿಂಗಳಲ್ಲಿ ಒಟ್ಟು 20 ಲಕ್ಷ ಓದುಗರು ‘ಪ್ರತಿದಿನ’ದ ಪುಟ ತೆರೆದು ನ್ಯೂಸ್ ಓದಿದ್ದಾರೆ. 2.27 ಲಕ್ಷ ಮಂದಿ ಶಾಶ್ವತ ಓದುಗರು ಇದ್ದಾರೆ.
ಇದೊಂದು ದಾಖಲೆ ಎನ್ನಬಹುದು. ನಮ್ಮ ಈ ಯಶಸ್ಸಿಗೆ ಕಾರಣಕರ್ತರಾದ ಓದುಗ ಅಭಿಮಾನಿಗಳಿಗೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇವೆ.

- Advertisement -

ಇದು ನಿರೀಕ್ಷೆಗಿಂತ ದೊಡ್ಡ ಪ್ರಮಾಣದಲ್ಲಿ ವೀಕ್ಷಕರನ್ನು ಸಂಪಾದಿಸಿದೆ. ದ.ಕ. ಜಿಲ್ಲೆಯಲ್ಲಿ ಹಲವು ಪತ್ರಿಕೆ, ದೃಶ್ಯ ಮಾಧ್ಯಮಗಳಲ್ಲಿ ಹಲವು ವರ್ಷಗಳಿಂದ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ವರದಿಗಾರರು, ಅಂಕಣಗಾರರು, ಸಾಮಾಜಿಕ ಜಾಲತಾಣಗಳಲ್ಲಿ ಹಿಡಿತ ಇರುವ ವ್ಯಕ್ತಿಗಳು ಜತೆಗೂಡಿಕೊಂಡು ಸ್ಥಾಪಿಸಿದ ಸಂಸ್ಥೆಯಾಗಿದೆ ‘ಪ್ರತಿದಿನ’ ವೆಬ್ ಸೈಟ್.

- Advertisement -

ಜಿಲ್ಲೆಯಲ್ಲಿ ಸಾಕಷ್ಟು ವೆಬ್ ಪೋರ್ಟಲ್   ಕಾರ್ಯಾಚರಿಸುತ್ತಿದ್ದರೂ ಇವೆಲ್ಲದರ ಮಧ್ಯೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಲು ಓದಗರು ಮುಖ್ಯ ಕಾರಣಕರ್ತರಾಗಿದ್ದಾರೆ. ನಮ್ಮ ಸಂಸ್ಥೆ ಇತರ ಮಾಧ್ಯಮ ಸಂಸ್ಥೆಗಳಿಗಿಂತ ವಿಭಿನ್ನವಾಗಿ ಕಾರ್ಯಾಚರಿಸುತ್ತಿದೆ. ಯಾವುದೇ ಆಮಿಷಗಳಿಗೆ ಬಲಿಯಾಗದೆ ದಮನಿತರ ಧ್ವನಿಯಾಗಿ ಮುನ್ನಡೆಯಬೇಕೆಂಬ ಸಂಕಲ್ಪ ನಮ್ಮದು. ಯಾವುದೇ ನಿರ್ದಿಷ್ಟ ಜಾತಿ, ಧರ್ಮ, ಪಂಥ, ಪಕ್ಷ ಅಥವಾ ಸಂಘಟನೆಯ ಮುಖವಾಣಿಯಾಗದೇ ಮುಂದುವರಿಯುವ ದೃಢವಿಶ್ವಾಸ ಹೊಂದಿದ್ದೇವೆ. ನಾವು ಪ್ರಕಟಿಸುವ ಪ್ರತಿಯೊಂದು ಸುದ್ದಿಯೂ ವಿಭಿನ್ನ ಹಾಗೂ ವಿಶಿಷ್ಟ ಶೈಲಿರುತ್ತದೆ.

- Advertisement -


‘ಪ್ರತಿದಿನ’ ಸುದ್ದಿಗಳನ್ನು ಭಾರತ ಮಾತ್ರವಲ್ಲದೇ ಸೌದಿ ಅರೇಬಿಯಾ, ದುಬೈ, ಅಮೇರಿಕಾ, ಕತರ್, ಕುವೈಟ್, ಯುರೋಫ್ ಮೊದಲಾದ ದೇಶಗಳಲ್ಲಿರುವ ಕನ್ನಡಿಗರು ಓದುತ್ತಿದ್ದಾರೆ. ‘ಪ್ರತಿದಿನ’ ವೆಬ್ ಪ್ರಾರಂಭಿಸುವಾಗ ಹಾಗೂ ಈಗಲೂ ನಮ್ಮನ್ನು ಪ್ರೋತ್ಸಾಹಿಸುತ್ತಿರುವ ಅಭಿಮಾನಿಗಳಿಗೆ, ನಮ್ಮ ಓದುಗರಿಗೆ, ಜಾಹೀರಾತುದಾರರಿಗೆ, ಹಿತೈಷಿಗಳಿಗೆ ಅನಂತ ಅನಂತ ಧನ್ಯವಾದಗಳನ್ನು ಅರ್ಪಿಸುತ್ತಾ ನಮ್ಮ ಮುಂದಿನ ಪ್ರತಿ ಹೆಜ್ಜೆಗೂ ಇದೇ ರೀತಿಯ ಬೆಂಬಲವನ್ನು ನೀಡಬೇಕಾಗಿ ವಿನಂತಿಸುತ್ತೇವೆ.
-ಸಂಪಾದಕ.

- Advertisment -

Most Popular