Home ನಿಮ್ಮ ಅಂಕಣ ಆಧಾರ್ ' ತಿದ್ದುಪಡಿ ಕೇಂದ್ರ ವ್ಯವಸ್ಥಿತವಾಗಿ ಹೆಚ್ಚಿಸಲು ಆಗ್ರಹ

ಆಧಾರ್ ‘ ತಿದ್ದುಪಡಿ ಕೇಂದ್ರ ವ್ಯವಸ್ಥಿತವಾಗಿ ಹೆಚ್ಚಿಸಲು ಆಗ್ರಹ

✍️ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ               
‘ಆಧಾರ್’ ಸರ್ವದಕ್ಕೂ ಮುಖ್ಯ, ಆದರೆ ಮುಗಿಯದ ಸಮಸ್ಯೆಯಾಗಿ ಅದು ಜನ ಸಾಮಾನ್ಯರಿಗೆ ತಲೆನೋವಾಗಿ ಮಾರ್ಪಟ್ಟದ್ದು ದುರದೃಷ್ಟಕರ. ಬೇಕಾದಷ್ಟು ವ್ಯವಸ್ಥೆ ಇಲ್ಲದ್ದು ಮುಖ್ಯ ಕಾರಣ. ಕೇವಲ ಬೆರಳೆಣಿಕೆಯಷ್ಟು ಕೇಂದ್ರಗಳಲ್ಲಿ ಅದರ ತಿದ್ದುಪಡಿ ನಡೆಯುತ್ತಿದೆ. ಘಂಟೆಗಟ್ಟಲೆ ಕಾದು ಕುಳಿತು ಒಮ್ಮೆ ಹೇಗಾದರೂ ಕಂಪ್ಯೂಟರ್ ಮುಂದೆ ತಲುಪಿ ಆಧಾರ್ ಮಾಡಿಸಿದರೂ, ಅಥವಾ ತಿದ್ದುಪಡಿಸಿದರೂ ಯಾವುದಾದರೂ ಒಂದು ಕಾರಣಕ್ಕೆ ಅದು ರೆಜೆಕ್ಟ್ ಆಗುವುದು, ತಪ್ಪು ಪುನರಾವರ್ತನೆ ಯಾಗುವುದು ಸರ್ವ ಸಾಮಾನ್ಯವಾಗಿದೆ.

- Advertisement -

ಮಕ್ಕಳ ಶೈಕ್ಷಣಿಕ ಅವಶ್ಯಕತೆಗಾಗಿ, ಬ್ಯಾಂಕ್ ವ್ಯವಹಾರಕ್ಕಾಗಿ, ಚಿಕಿತ್ಸೆಯ ಅಗತ್ಯಕ್ಕಾಗಿ, ಸರಕಾರಿ ಸವಲತ್ತಿಗಾಗಿ ಮೊರೆಹೋದಾಗ ಆಧಾರ್ ಲಿಂಕ್ ಅಥವಾ ಅದರಲ್ಲಿರುವ ಸ್ಪೆಲ್ಲಿಂಗ್ ಮಿಸ್ಟೆಕ್ ಅಡ್ಡಗೋಡೆಯಾಗುವುದು ಜನಸಾಮಾನ್ಯರ ಪಾಲಿಗೆ ನೋವು ತರುತ್ತಿದೆ. ಇದೀಗ ರೇಷನ್ ಕಾರ್ಡ್ ಆಧಾರ್ ಲಿಂಕ್ ನಡೆಯುವ ಕಾಲವಾದ್ದರಿಂದ ಆಧಾರ್ ತಿದ್ದುಪಡಿ ಮಾಡಲು ಜನರ ಸಾಹಸ ಅಷ್ಟಿಷ್ಟಲ್ಲ. ಈಗಾಗಲೇ ಸುಳ್ಯದಲ್ಲಿ ಕಾರ್ಯಾಚರಿಸುತ್ತಿರುವ ಆಧಾರ್ ತಿದ್ದುಪಡಿ ಕೇಂದ್ರದಲ್ಲಿ ಒಂದು ಕಂಪ್ಯೂಟರ್ ಓರ್ವ ಓಪರೇಟರ್ ಮುಂದೆ ಮಕ್ಕಳು, ವೃದ್ಧರು, ರೋಗಿಗಳು, ಮಹಿಳೆಯರು ದಿನ ಪೂರ್ತಿ ಕಾಯುವ ಮನಕಲಕುವ ದೃಶ್ಯ ಕಾಣಬಹುದಾಗಿದೆ.

- Advertisement -

ಪ್ರಸ್ತುತ ಅವ್ಯವಸ್ಥೆಗಳ ವಿವರಣೆ ಧಾರಾಳವಿದೆ. ಆದುದರಿಂದ ಮಾನ್ಯ ಸಚಿವರುಗಳು,ಜನ ಪ್ರತಿನಿಧಿಗಳು, ಸಂಬಂಧ ಪಟ್ಟ ಇಲಾಖಾ ಅಧಿಕಾರಿಗಳಲ್ಲಿ ಜನ ಹಿತಕ್ಕಾಗಿ, ಜನ ಸೇವೆಗಾಗಿ ” ಆಧಾರ್ ” ಕೇಂದ್ರಗಳನ್ನು ಹೆಚ್ಚುವರಿಯಾಗಿ, ವ್ಯವಸ್ಥಿತವಾಗಿ, ಓಪರೇಟರ್ ಸಂಖ್ಯೆ ಹೆಚ್ಚಿಸಿ ಜನ ಸಾಮಾನ್ಯರೊಂದಿಗೆ ಕರುಣೆ ತೋರಬೇಕೆಂದು ಪತ್ರಿಕಾ ಮಾಧ್ಯಮ ಮೂಲಕ ಕಳಕಳಿ ವಿನಂತಿಸುತ್ತೇನೆ.

- Advertisement -
- Advertisment -

Most Popular