Home ನಿಮ್ಮ ಅಂಕಣ ವಿಟ್ಲ 'ಸ್ಪೈಸಿ'ಯಲ್ಲಿ ಸೂಪರ್ ಟೇಸ್ಟ್ ಅರೆಬಿಕ್ ಮಂದಿ ಪ್ರಾರಂಭ..!

ವಿಟ್ಲ ‘ಸ್ಪೈಸಿ’ಯಲ್ಲಿ ಸೂಪರ್ ಟೇಸ್ಟ್ ಅರೆಬಿಕ್ ಮಂದಿ ಪ್ರಾರಂಭ..!

ವಿಟ್ಲ: ವಿಟ್ಲದ ಪುತ್ತೂರು ರಸ್ತೆಯಲ್ಲಿರುವ ಸ್ಪೈಸಿ ರೆಸ್ಟೋರೆಂಟ್ ನಲ್ಲಿ ಗಲ್ಫ್ ರಾಷ್ಟ್ರದ ಅದೇ ರುಚಿಯಿರುವ ಉತ್ತಮ ಗುಣಮಟ್ಟದ ಬಿಸಿಬಿಸಿ ಅರೆಬಿಕ್ ಮಂದಿ ಗ್ರಾಹಕರ ಹೊಟ್ಟೆ ಮತ್ತು ಮನ ತಣಿಸಲು ತಯಾರಾಗಿದೆ. ಕೇರಳದ ಮಲಪ್ಪುರಂನ ಪ್ರಸಿದ್ಧ ಅರೆಬಿಕ್ ಬಾಣಸಿಗರನ್ನು ಈ ಮಂದಿ ತಯಾರಿಕೆಗಾಗಿ ತರಿಸಲಾಗಿದೆ. ಗಲ್ಫ್ ಹಾಗೂ ಸ್ವದೇಶದಲ್ಲಿ ಪ್ರಸಿದ್ಧಿ ಪಡೆದ ಕುಕ್ ಇವರಾಗಿದ್ದಾರೆ. ತುಂಬಾ ಸಾಫ್ಟ್ ಆಗಿರುವ ಅರೆಬಿಕ್ ಮಟನ್ ಮಂದಿ ಬಾಯಿಯಲ್ಲಿ ನೀರೂರಿಸುತ್ತದೆ.

- Advertisement -

ಅರೆಬಿಕ್ ಚಿಕನ್ ಮಂದಿ, ಅಲ್ ಫಹಮ್ ಮಂದಿ ಕೂಡಾ ಇಲ್ಲಿದೆ. ಮಂದಿ ಕೊಡುವ ಮೊದಲು ರುಚಿಕರವಾದ ಕಾಂಪ್ಲಿಮೆಂಟರಿ ಸೂಪ್ ನೀಡಲಾಗುತ್ತದೆ. ಮಂದಿ ಉಣ್ಣಲು ವಿಶಾಲವಾದ ಮಜ್ಲಿಸ್ ವ್ಯವಸ್ಥೆ ಕೂಡಾ ಮಾಡಲಾಗಿದೆ. ಮಕ್ಕಳಿಗೆ ಆಟವಾಡುವ ಪ್ಲೇ ರೂಮ್ ಇಲ್ಲಿನ ವಿಶೇಷತೆ. ವಿಟ್ಲದಲ್ಲಿ ಹಲವಾರು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಸ್ಪೈಸಿ ರೆಸ್ಟೋರೆಂಟ್ ಪರಿಸರದಲ್ಲಿ ಮನೆಮಾತಾದ ಸಂಸ್ಥೆ.

- Advertisement -

ಇಲ್ಲಿ ಸೌತ್ ಇಂಡಿಯಾ, ನಾರ್ತ್ ಇಂಡಿಯಾ, ಚೈನೀಸ್ ಹಾಗೂ ಅರೆಬಿಕ್ ನಾನ್ ವೆಜ್ ಫುಡ್ ಗಳಿವೆ. ಬ್ರೋಸ್ಟಡ್ ಚಿಕನ್ಸ್ ಇವೆ. ಜೊತೆಗೆ ಐಸ್ಕ್ರೀಮ್, ಜ್ಯೂಸ್ ಗಳೂ ಇದೆ. ಫ್ಯಾಮಿಲಿ ರೂಮ್ ಜೊತೆಗೆ ಮೀಟಿಂಗ್ ಡೈನ್ ಗಳಿವೆ. ಹೊಸತಾಗಿ ಮಂದಿ ಮಜ್ಲಿಸ್ ಸ್ಥಾಪಿಸಲಾಗಿದೆ. ಅರೆಬಿಕ್ ಮಂದಿಗಾಗಿ ದೂರದ ಊರನ್ನು ಆಶ್ರಯಿಸುತ್ತಿದ್ದ ಜನತೆ ಅದಕ್ಕಿಂತಲೂ ರಚಿಕರವಾದ ಮಂದಿ ವಿಟ್ಲದಲ್ಲಿ ಸಿಗುವಾಗ ಇತರೆಡೆಯಿಂದ ಸ್ಪೈಸಿಗೆ ಗ್ರಾಹಕರು ಮುಗಿಬೀಳುವುದರಲ್ಲಿ ಸಂಶಯವಿಲ್ಲ. ಒಮ್ಮೆ ನೀವೂ ಟೇಸ್ಟ್ ಮಾಡಿ ಅನಿಸಿಕೆ ತಿಳಿಸಿ. ಸ್ಪೈಸಿ ನಂಬ್ರ: 7892105265
ರಶೀದ್ ವಿಟ್ಲ.

- Advertisement -
- Advertisment -

Most Popular