Home ನಿಮ್ಮ ಅಂಕಣ ಮಧ್ಯಪ್ರದೇಶ : ತರಭೇತಿ ವಿಮಾನ ಅಪಘಾತ , ಪೈಲಟ್ ಪ್ರಾಣಾಪಾಯದಿಂದ ಪಾರು

ಮಧ್ಯಪ್ರದೇಶ : ತರಭೇತಿ ವಿಮಾನ ಅಪಘಾತ , ಪೈಲಟ್ ಪ್ರಾಣಾಪಾಯದಿಂದ ಪಾರು

ಸಾಗರ್ : ಮಧ್ಯಪ್ರದೇಶದ ಧನಾ ಏರ್‌ಸ್ಟ್ರಿಪ್‌ನಲ್ಲಿ ತರಬೇತಿ ಪಡೆಯುತ್ತಿದ್ದ ಲಘು ವಿಮಾನ ಶನಿವಾರ ಅಪಘಾತಕ್ಕೀಡಾಗಿ ದ್ದು, ಅದೃಷ್ಟವಶಾತ್ಪೈಲಟ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

- Advertisement -


ಚೈಮ್ಸ್ ಏವಿಯೇಷನ್ಗೆ ಸೇರಿದ ಸೆಸ್ನಾ 172 ಹೆಸರಿನ ವಿಮಾನವು ಅಪಘಾತಕ್ಕೀಡಾದ ವಿಮಾನವಾಗಿದೆ. ಕಳೆದ ವರ್ಷ ಇದೇ ಸಂಸ್ಥೆಯ ವಿಮಾನ ಅಪಘಾತವಾಗಿ ಇಬ್ಬರು ಮೃತಪಟ್ಟಿದ್ದರು. ನಂತರ ಇಲ್ಲಿ ಏರ್ಸ್ಟ್ರಿಪ್ ಬಳಸುವುದನ್ನು ನಿಷೇಧಿಸಲಾಗಿತ್ತು. ಆದರೆ, ಕೆಲ ದಿನಗಳ ಹಿಂದಷ್ಟೇ ಆ ನಿರ್ಬಂಧವನ್ನು ತೆಗೆದುಹಾಕಿ ಇಲ್ಲಿ ವಿಮಾನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು.

- Advertisement -



ಶನಿವಾರ ಸಂಜೆ ಅಪಘಾತ ನಡೆದಿದ್ದು, 22 ವರ್ಷದ ಟ್ರೈನಿಂಗ್ ಪೈಲಟ್ ಸುರಕ್ಷಿತ ಎಂದು ಸ್ಥಳೀಯ ಆಡಳಿತಾಧಿಕಾರಿ ರಾಹುಲ್ ಶರ್ಮಾ ತಿಳಿಸಿದ್ದಾರೆ. ವಿಮಾನವು ರನ್ವೇನಿಂದ ಹೊರಟು ಬಳಿಕ ಪಕ್ಕದಲ್ಲಿದ್ದ ಪೊದೆಗಳಿಗೆ ನುಗ್ಗಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ.

- Advertisement -
- Advertisment -

Most Popular