Home ನಿಮ್ಮ ಅಂಕಣ ಬೆಳ್ಳಂಬೆಳಗ್ಗೆ ಅಸ್ಸಾಂ, ಮಣಿಪುರ, ಮೇಘಾಲಯ ರಾಜ್ಯಗಳಲ್ಲಿ ಭೂಕಂಪನ

ಬೆಳ್ಳಂಬೆಳಗ್ಗೆ ಅಸ್ಸಾಂ, ಮಣಿಪುರ, ಮೇಘಾಲಯ ರಾಜ್ಯಗಳಲ್ಲಿ ಭೂಕಂಪನ

ನವದೆಹಲಿ : ಇಂದು ಬೆಳ್ಳಂಬೆಳಗ್ಗೆ ಭಾರತದ ಈಶಾನ್ಯ ಭಾಗವಾದ ಅಸ್ಸಾಂ, ಮಣಿಪುರ ಮತ್ತು ಮೇಘಾಲಯ ರಾಜ್ಯಗಳಲ್ಲಿ ಭೂಕಂಪನ ಸಂಭವಿಸಿವೆ ಎಂದು ನ್ಯಾಷನಲ್ ಸೆಂಟರ್ ಫಾರ್ ಸೀಸ್ಮಾಲಜಿ (ಎನ್ ಸಿಎಸ್) ತಿಳಿಸಿದೆ.

ಅಸ್ಸಾಂನ ಸೋನಿತ್ ಪುರ್ ಜಿಲ್ಲೆಯಲ್ಲಿ 4.1 ತೀವ್ರತೆಯ ಭೂಕಂಪ ಮತ್ತು ಮೇಘಾಲಯದ ಮಣಿಪುರದ ಚಂದೇಲ್ ಮತ್ತು ಪಶ್ಚಿಮ ಖಾಸಿ ಬೆಟ್ಟಗಳಲ್ಲಿ ಕ್ರಮವಾಗಿ 3.0 ಮತ್ತು 2.6 ಭೂಕಂಪಗಳು ದಾಖಲಾಗಿವೆ ಎಂದು ಎನ್ ಸಿಎಸ್ ಹೇಳಿದೆ.

- Advertisement -


ಸೋನಿತ್ ಪುರ ಜಿಲ್ಲೆಯ ತೇಜ್ ಪುರ್ ಪಟ್ಟಣಕ್ಕೆ ಮೂರು ದಿನಗಳಲ್ಲಿ ಅಪ್ಪಳಿಸಿದ ಎರಡನೇ ಭೂಕಂಪ ಇದಾಗಿದೆ. ಮಂಗಳವಾರ ರಾತ್ರಿ, ತೇಜ್ ಪುರ್ ನಲ್ಲಿ 3.0 ತೀವ್ರತೆಯ ಭೂಕಂಪ ಸಂಭವಿಸಿದೆ. ಇದು ರಾತ್ರಿ 10.53 ರ ಸುಮಾರಿಗೆ 10 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ ಮತ್ತು ಕೇಂದ್ರಬಿಂದು ತೇಜ್ ಪುರದಿಂದ ಪಶ್ಚಿಮಕ್ಕೆ 60 ಕಿಲೋಮೀಟರ್ ದೂರದಲ್ಲಿದೆ.ಎಂದು ಎನ್ ಸಿಎಸ್ ತಿಳಿಸಿದೆ.

- Advertisement -
- Advertisment -

Most Popular