Home ನಿಮ್ಮ ಅಂಕಣ ಸ್ವಾತಂತ್ರ್ಯ ಸಮರವೂ - ಹೃದಯ ವೈಶಾಲ್ಯಾತೆಯೂ

ಸ್ವಾತಂತ್ರ್ಯ ಸಮರವೂ – ಹೃದಯ ವೈಶಾಲ್ಯಾತೆಯೂ

ಲೇಖನ: ರಾಧಾಕೃಷ್ಣ ಎರುಂಬು
ಬಹಳ ಹೆಮ್ಮೆಯಿಂದ ಹೇಳುತ್ತೇವೆ ನಾವು ಭಾರತೀಯರೆಂದು. ಭಾರತೀಯತೆಯ ಪ್ರಾಮುಖ್ಯತೆಯನ್ನು ಅರಿತವರು ಆ ಸಂತೋಷವನ್ನು ಎದೆಗವಚಿಕೊಂಡು, ಹೃದಯತುಂಬಿ ತೇಗಿದವರು 19ನೇ, ತಪ್ಪಿದರೆ 20ನೇ ಶತಮಾನದವರೇ ಹೆಚ್ಚು. ಸ್ವಾತಂತ್ರ್ಯ ಸಂಗ್ರಾಮ ನಮ್ಮ ಹಿರಿ ತಲೆಮಾರು ಇದ್ದೋ -ಇಲ್ಲದೆಯೂ, ದೇಶಕ್ಕಾಗಿ ಹಿಂಸೆಯೋ- ಅಹಿಂಸೆಯೋ, ಧೈರ್ಯದಿಂದಲೋ- ಉಪದೇಶಿತ ಧೈರ್ಯದಿಂದಲೋ ಮುಂದೆ ಬಂದು ಕಷ್ಟ ನಷ್ಟ ಅನುಭವಿಸಿ, ಜೈಲು, ಲಾಟಿ ಬೂಟು, ಏಟು ತಿಂದು ಗಲ್ಲಿಗೇರಿಸಲ್ಪಟ್ಟು ಅಪ್ಪಟ ಹೋರಾಟಗಾರರೆಂದು ಈಗ ಪವಿತ್ರ ಪುಟಗಳಲ್ಲಿ ರಾರಾಜಿಸಿದ ದೇಶ ಪ್ರೇಮಿಗಳ ನೆನಪು ವರ್ಷದ ಒಂದು ದಿನಕ್ಕೆ ಮೀಸಲಾಗಿದೆ.

- Advertisement -

ಇಂದು ಎದೆ ಬಿರಿದು ನಡೆವ ಎದೆಗಾರಿಕೆ ಬಂದುದು ಆ ರಕ್ತ ಚೆಲ್ಲಿದ ವೀರರಿಂದ ಎನ್ನುವುದನ್ನು ಪೂರ್ತಿಯಾಗಿ ಮರೆತಿದ್ದೇವೆ. ಎಲ್ಲವೂ ಸಾಂಕೇತಿಕವಾಗಿ ಆಚರಿಸಲ್ಪಡುವ 21ನೇ ಶತಮಾನ ಮುಂದೊಂದು ದಿನ ಪ್ರಕೃತಿದತ್ತವಾಗಿ ನೀಡಲ್ಪಡುವ ಶಿಕ್ಷೆಗೆ ಗುರಿಯಾಗಬೇಕೋ ಎನ್ನುವ ಭಯವೇ ಕಾಡುತ್ತಿದೆ. ಬ್ರಿಟಿಷರ ತಾಪಕ್ಕೆ ತಡೆಯೊಡ್ದುವ ಶಕ್ತಿ ನಮ್ಮಲ್ಲಿ ಒಮ್ಮಿಳಿತವಾದ ದಿನಗಳಲ್ಲಿ ಯಶಸ್ಸು ಪಡೆದಿದ್ದೇವೆ ಸತ್ಯ. ಆದರೆ ಪ್ರಕೃತಿಯ ತೆಕ್ಕೆಗೆ ತಡೆಯೊಡ್ಡುವವರು ಯಾರು? ಸರಕಾರವೇ? ರಾಜಕಾರಣಗಳೇ ? ಹಿಂಸಾ -ಅಹಿಂಸಾವಾದವೆ? ಕ್ಷೇತ್ರ ತಜ್ಞರುಗಳೆ? ಉತ್ತರ ಪ್ರಶ್ನೆ ಮಾತ್ರ.

- Advertisement -

ಕಾರಣಾಂತರಗಳಿಂದ ಅಂಕುಡೊಂಕುಗಳನ್ನು ಅನುಭವಿಸುತ್ತಿರುವ ದೇಶದ- ಜಗತ್ತಿನ ಶಿಕ್ಷಣ ಪರಿಸ್ಥಿತಿ ಡೋಲಾಯಮಾನವಾಗಿ ಶಿಕ್ಷಣ ನುರಿತರಿಂದ ಇದಕ್ಕೆ ಮುಂದೊಂದು ದಿನದಲ್ಲಿ ಉತ್ತರ ನಿರೀಕ್ಷಿಸಬಹುದೇ?
ಒಂದಂತೂ ಸತ್ಯ “ಪರಸ್ಪರ ನಂಬಿಕೆ ವಿಶ್ವ ಸಮಯ ವಾತಾವರಣ ತೃಪ್ತಿಯಾಗಿ ಮತ್ತಷ್ಟು ಹೃದಯ ವೈಶಾಲ್ಯತೆ ಮನುಜನ ಸ್ನೇಹ ವಲಯದಲ್ಲಿ ಹರಿಸಿದಾಗ ಮಾತ್ರ” ಸಮಸ್ಯೆಯಿಂದ ದಬ್ಬಾಳಿಕೆಯಿಂದ ಸ್ವತಂತ್ರವಾಗಿ ಬದುಕುಳಿಯುವ ದಾರಿ ಕಾಣಬಹುದು.
ಮುದ್ದು ಕಂದಮ್ಮಗಳಿಗೆ ಸ್ವಾತಂತ್ರೋತ್ಸವ ಸಂಭ್ರಮಿಸುವ ಅವಕಾಶವಿಲ್ಲ,ಯೋಧರಿಗೆ ಸರಿಯಾದ ಪುರಸ್ಕಾರ ಗಳಿಲ್ಲ,ಸ್ವಾತಂತ್ರ್ಯ ಸಂಗ್ರಾಮಕ್ಕೆ ಬಲಿಯಾದ ಆತ್ಮಗಳಿಗೆ ಸರ್ವರಿಂದ ಗೌರವ ಪ್ರಧಾನ ಗಳಿಲ್ಲದ ನೀರವತೆಯ ಸ್ವಾತಂತ್ರ್ಯದ ದಿನಾಚರಣೆ ಇದು ಕೇವಲ ವಾಡಿಕೆಯ ಸುದಿನ ವಲ್ಲದೆ ಮನೋಬಿಷ್ಟ ಉತ್ಸವವಾಗಿರದು. ಭಾರತದಂತಹ ಸುಸಂಸ್ಕೃತ, ಸಂಸ್ಕಾರಯುತ, ದೇವನೆಲೆಯಾಗಿರುವ ಭಾರತದ ಸರ್ವ ಪ್ರಜೆಗಳೇ… ನಮ್ಮ ಹೃದಯ ವೈಶಾಲ್ಯತೆಯನ್ನು ಹೆಚ್ಚಿಸಿ ನಮ್ಮವರ ಮೇಲೆ ಪ್ರೀತಿ ತೋರಿ, ಪ್ರಕೃತಿ ಉಳಿಸಿ ಸ್ನೇಹಮಯ ಬದುಕು ಬಾಳುವ ದೊಡ್ಡ ಸಮರ ಬೇಕಾಗಿದೆ. ಇಲ್ಲವಾದರೆ ಮನುಷ್ಯ-ಮನುಷ್ಯರನ್ನು ತಿನ್ನುವ ಕ್ರೂರ ಸಮರದಲ್ಲಿ ನಾವೇ ಬಲಿಯಾಗುವ ದಿನ ದೂರವಿಲ್ಲ.

- Advertisement -
- Advertisment -

Most Popular