Home ನಿಮ್ಮ ಅಂಕಣ ಪಶ್ಚಿಮ ಬಂಗಾಳದಲ್ಲಿ ಟ್ರಾಲರ್ ದುರಂತ : 9 ಮೀನುಗಾರರ ಶವ ಪತ್ತೆ

ಪಶ್ಚಿಮ ಬಂಗಾಳದಲ್ಲಿ ಟ್ರಾಲರ್ ದುರಂತ : 9 ಮೀನುಗಾರರ ಶವ ಪತ್ತೆ

ನಮ್ಖಾನಾ: ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಬಂಗಾಳಕೊಲ್ಲಿಯಲ್ಲಿ ಬುಧವಾರ ಟ್ರಾಲರ್ ದುರಂತ ಸಂಭವಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಇದೀಗ 9 ಮೀನುಗಾರರ ಶವಗಳು ಗುರುವಾರ ಬೆಳಗ್ಗೆ ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

- Advertisement -


ಬುಧವಾರ ಮುಂಜಾನೆ ಬಖಾಲಿ ಕರಾವಳಿಯ ರಕ್ತೇಶ್ವರಿ ದ್ವೀಪದ ಬಳಿ ಇದ್ದಕ್ಕಿದ್ದಂತೆ ಅಲೆಗಳು ಅಪ್ಪಳಿಸಿದ್ದು ಪರಿಣಾಮ ‘ಹೈಮಾಬತಿ’ ಎಂಬ ಟ್ರಾಲರ್ ಪಲ್ಟಿಯಾಗಿದೆ. ಇದೀಗ ೯ ಜನರ ಶವ ಪತ್ತೆಯಾಗಿದ್ದು ಒಬ್ಬ ವ್ಯಕ್ತಿ ನಾಪತ್ತೆಯಾಗಿದ್ದು, ಆತನಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

- Advertisement -


ಪಶ್ಚಿಮ ಬಂಗಾಳ ಸರ್ಕಾರವು ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ.ಪರಿಹಾರ ಘೋಷಣೆ ಮಾಡಿದೆ. ಜಮುನಾ ರಾಣಿ ಲಾಲ್ ಒಡೆತನದ ಟ್ರಾಲರ್ ಐದು ದಿನಗಳ ಹಿಂದೆ ನಮ್ಖಾನಾದ 10 ಮೈಲಿ ದೂರ ಪ್ರದೇಶಕ್ಕೆ ತೆರಳಿತ್ತು ಎನ್ನಲಾಗಿದೆ.

- Advertisement -
- Advertisment -

Most Popular