Home ನಿಮ್ಮ ಅಂಕಣ ತನ್ನ ಮಕ್ಕಳಿಗೆ ಉನ್ನತ ಶಿಕ್ಷಣ ಕೊಟ್ಟು ಅವರನ್ನೇ ಆಸ್ತಿ ಮಾಡಿದ ಸವಣೂರಿನ ಗೂಡಂಗಡಿ ಒಣ ಮೀನು...

ತನ್ನ ಮಕ್ಕಳಿಗೆ ಉನ್ನತ ಶಿಕ್ಷಣ ಕೊಟ್ಟು ಅವರನ್ನೇ ಆಸ್ತಿ ಮಾಡಿದ ಸವಣೂರಿನ ಗೂಡಂಗಡಿ ಒಣ ಮೀನು ವ್ಯಾಪಾರಿ ಅಬುಬಕ್ಕರ್ ರವರಿಗೆ ಸನ್ಮಾನದ ಗರಿ

ನಾವು ಪದೇ ಪದೇ ಹೇಳುವ ಒಂದು ಮಾತು “ಮಕ್ಕಳಿಗಾಗಿ ಆಸ್ತಿ ಮಾಡುವುದಕ್ಕಿಂತಲೂ ಮಕ್ಕಳನ್ನೇ ಆಸ್ತಿ ಮಾಡೋಣ”. ಹೀಗೆ ತನ್ನ ಮಕ್ಕಳಿಗೆ ಉನ್ನತ ಶಿಕ್ಷಣವನ್ನು ಕೊಟ್ಟು ಅವರನ್ನು ಆಸ್ತಿಯನ್ನಾಗಿ ರೂಪಿಸಿದ ಓರ್ವ ಶಿಕ್ಷಣ ಪ್ರೇಮಿ ಅಬೂಬಕ್ಕರ್ ಸವಣೂರು. ಪುತ್ತೂರು ತಾಲೂಕಿನ ಸವಣೂರಿನ ಬಸ್ಸು ನಿಲ್ದಾಣದ ಎದುರುಗಡೆ ಸಣ್ಣ ಗೂಡಂಗಡಿಯಲ್ಲಿ ಒಣಮೀನು ವ್ಯಾಪಾರಿ. ತನ್ನ ಮಕ್ಕಳ ಶಿಕ್ಷಣದ ಕನಸನ್ನು ನನಸು ಮಾಡಿದ ಅಕ್ಷರ ಪ್ರೇಮಿ. ಅದಕ್ಕಾಗಿ ಬಹಳಷ್ಟು ಕಷ್ಟಪಟ್ಟ ತ್ಯಾಗಿ.

- Advertisement -

ಮೊದಲ ಮಗಳು ಡೆಂಟಿಸ್ಟ್. ಮದುವೆಯಾಗಿ ಸಾಫ್ಟ್ ವೇರ್ ಇಂಜಿನಿಯರ್ ಗಂಡನೊಂದಿಗೆ ಸಿಂಗಾಪುರದಲ್ಲಿ ವೈದ್ಯಕೀಯ ವೃತ್ತಿಯನ್ನು ನಡೆಸುತ್ತಿದ್ದಾರೆ. ಎರಡನೇ ಮಗ ಮೆಕ್ಯಾನಿಕಲ್ ಇಂಜಿನಿಯರ್, ಈಗಷ್ಟೇ ಶಿಕ್ಷಣ ಪೂರ್ತಿಗೊಳಿಸಿದ್ದಾರೆ. ಮೂರನೇ ಮಗಳು ಬಿಎಸ್ಸಿ. ನಾಲ್ಕನೇ ಮಗ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಓದುತ್ತಾ ಇದ್ದಾರೆ. ಕೊನೆಯ ಮಗಳು ಪಿಯುಸಿ ಸೈನ್ಸ್ ಮಾಡಿ ಮೆಡಿಕಲ್ ಓದಲು ತಯಾರಿ ನಡೆಸುತ್ತಿದ್ದಾರೆ. ತನ್ನ 5 ಮಕ್ಕಳಿಗೂ ಉನ್ನತ ಶಿಕ್ಷಣವನ್ನು ಕೊಟ್ಟು ಅವರನ್ನು ಸ್ವಂತ ಕಾಲಲ್ಲಿ ನಿಲ್ಲುವಂತೆ ಮಾಡಿದ್ದಾರೆ. ಅವರನ್ನು ಆಸ್ತಿಯಾಗಿ ರೂಪಿಸಿದ್ದಾರೆ.

- Advertisement -

ನಮ್ಮಲ್ಲಿ ಬಹಳಷ್ಟು ಅನುಕೂಲತೆಗಳು ಇದ್ದರೂ ಕೆಲವೊಮ್ಮೆ ನಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುವಲ್ಲಿ ನಾವು ವಿಫಲರಾಗುತ್ತೇವೆ. ಆದರೆ ಅಬೂಬಕ್ಕರ್ ರವರು ಅನೇಕ ಸವಾಲು, ಸಮಸ್ಯೆಗಳ ಮಧ್ಯೆಯೂ ತನ್ನ ಮಕ್ಕಳಿಗೆ ಉನ್ನತ ಶಿಕ್ಷಣವನ್ನು ಕೊಟ್ಟಿದ್ದಾರೆ. ಆ ಮೂಲಕ ನಮಗೆಲ್ಲರಿಗೂ ಸ್ಫೂರ್ತಿಯ ಸೆಲೆಯಾಗಿದ್ದಾರೆ, ಮಾದರಿಯಾಗಿದ್ದಾರೆ.

- Advertisement -

ಪುತ್ತೂರು ಕಮ್ಯುನಿಟಿ ಸೆಂಟರ್ ವತಿಯಿಂದ ಅಬೂಬಕ್ಕರ್ ಸವಣೂರು ರವರನ್ನು ಅವರ ಗೂಡಂಗಡಿಯಲ್ಲಿ ಅಭಿಮಾನದಿಂದ ಶಾಲು ಹೊದಿಸಿ ಪುಷ್ಪಗುಚ್ಚ ನೀಡಿ ಗ್ರಾಮ ಪಂಚಾಯತ್ ಸದಸ್ಯ ಜನಾಬ್ ರಫೀಕ್ ಸವಣೂರು ಸನ್ಮಾನಿಸಿದರು. ಪುತ್ತೂರು ಕಮ್ಯುನಿಟಿ ಸೆಂಟರ್ ನ ಸದಸ್ಯ ಜನಾಬ್ ಮುಝಮ್ಮಿಲ್, ಮೌಲಾನಾ ಆಜಾದ್ ಶಾಲೆಯ ಉಪಪ್ರಾಂಶುಪಾಲರಾದ ಜನಾಬ್ ತೌಫೀಕ್, ಅಬೂಬಕ್ಕರ್ ರವರ 3 ಮಕ್ಕಳು ಮೊದಲಾದವರು ಉಪಸ್ಥಿತರಿದ್ದರು. ಬದುಕಿನಲ್ಲಿ ಅದೆಷ್ಟು ಸಸ್ಮಾನವನ್ನು ಮಾಡಿದ ನನಗೆ ಇವತ್ತಿನ ಸನ್ಮಾನ ಬಹಳಷ್ಟು ಹೃದಯಕ್ಕೆ ಸಂತಸವನ್ನು ಕೊಟ್ಟಿತು. ಇಂಥವರನ್ನು ಗುರುತಿಸುವುದರಿಂದ ಖಂಡಿತವಾಗಿಯೂ ಕೂಡ ಅಲ್ಲಾಹನ ಸಂಪ್ರೀತಿಗಾಗಿ ಪಾತ್ರವಾಗಬಹುದು ಎಂದು ನನ್ನ ಒಳ ಮನಸ್ಸು ಗಟ್ಟಿಯಾಗಿ ಹೇಳುತ್ತಿತ್ತು.

ಅಬೂಬಕ್ಕರ್ ರವರ ಅಕ್ಷರ ಪ್ರೀತಿ, ಮಕ್ಕಳ ಬಗ್ಗೆ ಇರುವ ಕನಸು ನಮಗೆಲ್ಲರಿಗೂ ಮಾದರಿಯಾಗಲಿ. ಸರ್ವಶಕ್ತನು ಅವರಿಗೆ ಒಳಿತನ್ನೇ ಮಾಡಲಿ ಆಮೀನ್.

ಉತ್ತಮ ಶಿಕ್ಷಣ ಮತ್ತು ಉತ್ತಮ ಸಂಸ್ಕಾರ ಇದಕ್ಕಿಂತ ಮಿಗಿಲಾದ ಕೊಡುಗೆಯನ್ನು ಯಾವ ತಂದೆಯೂ ತನ್ನ ಮಕ್ಕಳಿಗೆ ಕೊಡಲಾರನು, ಪ್ರವಾದಿ ವಚನ.

- Advertisment -

Most Popular