Home ನಿಮ್ಮ ಅಂಕಣ ಸುಳ್ಯದಲ್ಲೊಂದು ಕಸದ ಪರ್ವತಕಳೆದ ಹತ್ತು ವರ್ಷಗಳಿಂದ ಮುಗಿಯದ ಸಮಸ್ಯೆಮತ್ತೆ ಆರಂಭಗೊಂಡಿರುವ ಸುಳ್ಯ ಕಸದ ಚರ್ಚೆ, ಅತಿ...

ಸುಳ್ಯದಲ್ಲೊಂದು ಕಸದ ಪರ್ವತ
ಕಳೆದ ಹತ್ತು ವರ್ಷಗಳಿಂದ ಮುಗಿಯದ ಸಮಸ್ಯೆ

ಮತ್ತೆ ಆರಂಭಗೊಂಡಿರುವ ಸುಳ್ಯ ಕಸದ ಚರ್ಚೆ, ಅತಿ ಶೀಘ್ರದಲ್ಲಿ ಕಸದಿಂದ ವಿಮುಕ್ತಿಗೊಳಿಸುವ ಬಗ್ಗೆ ನ. ಪಂ ಅಧ್ಯಕ್ಷರಿಂದ ಭರವಸೆ

ಸುಳ್ಯ ನಗರ ಪಂಚಾಯತ್ ಆಡಳಿತಕ್ಕೆ ಹಲವಾರು ವರ್ಷಗಳಿಂದ ಬೆಂಬಿಡದೆ ಕಾಡುತ್ತಿರುವ ಸಮಸ್ಯೆ ಸುಳ್ಯದ ಕಸದ ವಿಚಾರವಾಗಿದೆ. ಯಾವುದೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಯಶಸ್ವಿಯಾಗುವ ಅಧಿಕಾರಿಗಳ ತಂಡಕ್ಕೆ ಸುಳ್ಯದ ಕಸದ ರಾಶಿಗಳು ಮಾತ್ರ ಕಬ್ಬಿಣದ ಕಡಲೆಯಂತಾಗಿದೆ.
ಹಲವಾರು ವರ್ಷಗಳಿಂದ ಸುಳ್ಯದ ಕಸದ ರಾಶಿಗಳ ಶೇಖರಣಾ ತಾಣವಾಗಿದ್ದ ಕಲ್ಚರ್ಪೆ ಸ್ಥಳೀಯರ ಹೋರಾಟ ಮತ್ತು ಆಕ್ಷೇಪಣೆ ಗಳಿಂದ ಕಳೆದ ಎರಡು ವರ್ಷಗಳಿಂದ ಸುಳ್ಯ ನಗರ ಪಂಚಾಯಿತಿ ಕಟ್ಟಡಕ್ಕೆ ಲಕ್ಷಾಂತರ ರೂಪಾಯಿ ಖರ್ಚು ವಹಿಸಿ ನಿರ್ಮಿಸಿದ ವಾಹನ ನಿಲುಗಡೆಯ ಶೆಡ್ ಎರಡನೇ ಕಲ್ಚರ್ಪೆಯಾಗಿ ಮಾರ್ಪಟ್ಟಿತು. ತದನಂತರ ಯಾವುದೇ ಅಧಿಕಾರಿಗಳು ಶ್ರಮಿಸಿದರು ಇಂದಿನವರೆಗೆ ಕಸವನ್ನು ತೆರವುಗೊಳಿಸಲು ಹರಸಾಹಸ ಪಟ್ಟರೂ ಸಾಧ್ಯವಾಗಲಿಲ್ಲ. ನಗರ ಪಂಚಾಯತ್ ಸಾಮಾನ್ಯ ಸಭೆಗಳಲ್ಲಿ ಇದರ ಬಗ್ಗೆ ನಾನಾ ರೀತಿಯ ಯೋಜನೆಗಳನ್ನು ರೂಪಿಸಿದರು ಕಸದಿಂದ ಮುಕ್ತಿ ಮಾತ್ರ ಸಿಗುತಿಲ್ಲ. ಇದೀಗ ಪ್ರಸ್ತುತ ಅಧಿಕಾರದಲ್ಲಿರುವ ನಗರ ಪಂಚಾಯಿತಿ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ರವರು ಈ ಕಸದ ಮುಕ್ತಿಗಾಗಿ ಅಧಿಕಾರಕ್ಕೆ ಬಂದ ಮೇಲೆ ಕೆಲವು ರೀತಿಯಲ್ಲಿ ಶ್ರಮಿಸುತ್ತಿದ್ದಾರೆ. ಆದರೆ ಕಳೆದ ದಶಕಗಳಿಂದ ಶೇಖರಣೆಯಾದ ಕಸದ ಪರ್ವತವನ್ನು ಕರಗಿಸುವುದು ಸುಲಭದ ಮಾತಲ್ಲ ಎಂಬುದು ಸತ್ಯ ಸಂಗತಿಯಾಗಿದೆ.
ತಮ್ಮ ಮತ್ತು ಸಂಬಂಧಪಟ್ಟ ಅಧಿಕಾರಿಗಳ ಬಳಿ ಇರುವ ಎಲ್ಲಾ ರೀತಿಯ ಆಲೋಚನೆಗಳನ್ನು ಯೋಜನೆಯಾಗಿ ರೂಪಿಸಿ ಆಡಿಕೊಳ್ಳುವ ಜನರ ಬಾಯಿಂದ ಮುಕ್ತರಾಗಲು ಶತ ಪ್ರಯತ್ನ ಪಡುತ್ತಿದ್ದಾರೆ.

- Advertisement -



ಕಸದ ತೆರವಿಗೆ ಪರ್ಯಾಯ ಸ್ಥಳ ಸುಳ್ಯ ಪರಿಸರದಲ್ಲಿ ಸಿಗುತ್ತಿಲ್ಲ. ಸಿಕ್ಕ ಸ್ಥಳವನ್ನು ಬಳಸಿಕೊಳ್ಳಲು ಮುಂದಾದರೆ ಸ್ಥಳೀಯರು ಅದನ್ನು ಬಿಡುತ್ತಿಲ್ಲ. ಕಸದ ಬಗ್ಗೆ ಜಾಗ್ರುತಿ ಮೂಡಿಸಿದರು ಯಾವುದೇ ಪ್ರಯೋಜನಗಳು ಕಂಡುಬರುತ್ತಿಲ್ಲ. ನಗರ ಪಂಚಾಯತ್ ಆವರಣದಲ್ಲಿ ಕಸಗಳು ತುಂಬಿ ಮನೆ ಮನೆ ಸಂಗ್ರಹಕ್ಕೆ ವಾಹನ ತೆರಳಲು ವಿಳಂಬಗೊಂಡರೆ ಸ್ಥಳೀಯ ನದಿ, ಅರಣ್ಯ ಪರಿಸರಗಳು ಕಸ ಗಳಿಂದ ತುಂಬಲು ಪ್ರಾರಂಭಿಸುತ್ತದೆ. ಸ್ಥಳೀಯ ಶಾಸಕರು ಇದೀಗ ಸಚಿವರಾಗಿದ್ದು ಸುಳ್ಯದ ಜನತೆಯಲ್ಲಿ ಆಶಾ ಭಾವನೆಗಳು ಮೂಡಿಬಂದಿದೆ. ಇನ್ನಾದರೂ ಸುಳ್ಯದ ಬಹುದೊಡ್ಡ ಸಮಸ್ಯೆಯಾಗಿರುವ ಕಸಕ್ಕೆ ಮುಕ್ತಿ ಸಿಗಬಹುದೆಂದು. ಇದೀಗ ಪೂಮಲೆ ಕಾಡಿನಿಂದ ಹರಿದು ಬರುವ ನೈಸರ್ಗಿಕ ನೀರು ಕಲ್ಚೆರ್ಪೆ ಕಸದ ಜತೆ ಸೇರಿ ಕೊಳಕು ನೀರಾಗಿ ಪಯಸ್ವಿನಿ ಸೇರುತ್ತಿದ್ದು ನಗರ ಪಂಚಾಯತ್ ಕಲ್ಚೆರ್ಪೆ ಯಲ್ಲಿ ವ್ಯವಸ್ಥೆ ಸರಿಪಡಿಸಲಾಗದೇ ಜನರಿಗೆ ವಿಷದ ನೀರು ನೀಡುತ್ತಿದೆ ಎಂದು ನಗರ ಕಾಂಗ್ರೆಸ್ ಆರೋಪಿಸಿದರೆ, ಸ್ಥಳೀಯರು ಪರಿಸರವನ್ನು ಕಸದಿಂದ ಮುಕ್ತಿಗೊಳಿಸಿ ಕೊಡಿ ಎಂದು ಕೇಳಿಕೊಳ್ಳುತ್ತಿದ್ದಾರೆ.

- Advertisement -



ಇದಕ್ಕೆ ಪ್ರತಿಕ್ರಿಯಿಸಿರುವ ನಗರ ಪಂಚಾಯತ್ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ‘ಕಲ್ಚರ್ಪೆಯಲ್ಲಿ ಆಧುನಿಕ ಯಂತ್ರಗಳನ್ನು ಅಳವಡಿಸಿ ಕಸ ವಿಲೇವಾರಿ ಮಾಡಲು ಸ್ಥಳವನ್ನು ಸಮತಟ್ಟು ಮಾಡಿ ಇರಿಸಲಾಗಿದೆ. ಅಲ್ಲಿ ಫೌಂಡೇಶನ್ ನಿರ್ಮಿಸಿ ಬರ್ನಿಂಗ್ ಮಷೀನ್, ಸಬ್ಸಿಡಿಯರ್ ಯಂತ್ರ, ಬೇರಿಂಗ್, ಸ್ಕ್ರೀನಿಂಗ್ ಯಂತ್ರಗಳನ್ನು ಅಳವಡಿಸಿ ಕಸವನ್ನು ಬರ್ನ್ ಮಾಡಿ ಪ್ರತಿ 100 ಕೆಜಿ ಕಸದಿಂದ 3 ಕೆಜಿ ಬೂದಿ ಆಗಲಿದ್ದು ಅದನ್ನು ಗೊಬ್ಬರವಾಗಿ ಬಳಕೆ ಮಾಡಲಾಗುತ್ತದೆ. ಅದೇ ರೀತಿ ನಗರ ಪಂಚಾಯತ್ ಆವರಣದಲ್ಲಿ ತುಂಬಿರುವ ಕಸವನ್ನು ಇದೇ ರೀತಿ ಮಾಡಲಾಗುವುದು ಎಂದು ಹೇಳಿದರು. ಇದಕ್ಕೆ ಸುಳ್ಯದ ಎಲ್ಲಾ ಜನತೆಯು ಸಹಕರಿಸಬೇಕು. ತಮ್ಮ ತಮ್ಮ ಮನೆಯಲ್ಲಿ ಸಂಗ್ರಹವಾಗುವ ಕಸಗಳನ್ನು ಬೇರ್ಪಡಿಸಿ ಅದರಿಂದ ಬರುವ ಉತ್ತಮ ಪ್ಲಾಸ್ಟಿಕ್ ಗಳನ್ನು ಮುಂದಿನ ದಿನಗಳಲ್ಲಿ ಪಂಚಾಯಿತಿ ನಿಂದಲೇ ಖರೀದಿಸಿ ಅದಕ್ಕೆ ಪರಿಹಾರ ಕಂಡುಕೊಳ್ಳುವ ಯೋಜನೆಗಳನ್ನು ರೂಪಿಸಲು ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಅವರು ಹೇಳಿದರು.

ವರದಿ.ಹಸೈನಾರ್ ಜಯನಗರ

- Advertisement -
- Advertisment -

Most Popular