Home ತಂತ್ರಜ್ಞಾನ 30 ಲಕ್ಷಕ್ಕೂ ಅಧಿಕ ಭಾರತೀಯರ ವಾಟ್ಸ್‌ಆ್ಯಪ್ ಖಾತೆಗಳಿಗೆ ನಿರ್ಬಂಧ

30 ಲಕ್ಷಕ್ಕೂ ಅಧಿಕ ಭಾರತೀಯರ ವಾಟ್ಸ್‌ಆ್ಯಪ್ ಖಾತೆಗಳಿಗೆ ನಿರ್ಬಂಧ

ನವದಹೆಲಿ: ಜೂನ್ 16ರಿಂದ ಜುಲೈ 31ರ ವರೆಗಿನ ಅವಧಿಯಲ್ಲಿ ಭಾರತದಲ್ಲಿ 30 ಲಕ್ಷಕ್ಕೂ ಅಧಿಕ ವಾಟ್ಸ್‌ಆ್ಯಪ್ ಖಾತೆಗಳನ್ನು ನಿರ್ಬಂಧಿಸಿರುವುದಾಗಿ ಸಂಸ್ಥೆಯು ತಿಳಿಸಿದೆ.

- Advertisement -

ಈ ಅವಧಿಯಲ್ಲಿ ಭಾರತದಲ್ಲಿ 30,27,000 ಖಾತೆಗಳನ್ನು ನಿರ್ಬಂಧಿಸಲಾಗಿದ್ದು, 594 ಕಂದುಕೊರತೆ ದೂರುಗಳು ದಾಖಲಾಗಿವೆ ಎಂದು ಹೇಳಿದೆ.

- Advertisement -

ಭಾರತೀಯ ಖಾತೆಗಳನ್ನು ‘+91’ ಮೊಬೈಲ್ ಸಂಖ್ಯೆಯ ಮೂಲಕ ಗುರುತಿಸಲಾಗಿದೆ ಎಂದು ತಿಳಿಸಿದೆ. ಈ ಹಿಂದೆ ಶೇ. 95 ನಿರ್ಬಂಧವು ಸ್ವಯಂಚಾಲಿತ ಅಥವಾ ಸ್ಪ್ಯಾಮ್‌ಗೆ ಸಂಬಂಧಪಟ್ಟಿವೆ. ಜಾಗತಿಕವಾಗಿ ತಿಂಗಳಿಗೆ ಸರಾಸರಿ 80 ಲಕ್ಷ ಖಾತೆಗಳನ್ನು ನಿರ್ಬಂಧಿಸಿರುವುದಾಗಿ ತಿಳಿಸಿದೆ.

- Advertisement -

ಬಳಕೆದಾರರ ಖಾತೆಯ ಸುರಕ್ಷತೆಗಾಗಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಕೃತಕ ಬುದ್ಧಿಮತ್ತೆ), ಡೇಟಾ ಸೈನ್ಸ್ ಇತ್ಯಾದಿ ತಂತ್ರಜ್ಞಾನಗಳಲ್ಲಿ ಹೆಚ್ಚಿನ ಹೂಡಿಕೆ ಮಾಡಲಾಗಿದೆ ಎಂದು ಸಂಸ್ಥೆಯು ತಿಳಿಸಿದೆ.

ನೂತನ ಐಟಿ ನಿಯಮ 2021ರ ಪ್ರಕಾರ ಜೂನ್ 16ರಿಂದ ಜುಲೈ 31ರ ವರೆಗೆ 46 ದಿನಗಳ ಅವಧಿಯ ಎರಡನೇ ಮಾಸಿಕ ವರದಿಯನ್ನು ಪ್ರಕಟಿಸಲಾಗಿದೆ ಎಂದು ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.

- Advertisment -

Most Popular